ಸಮರಸ ಚಿತ್ರಸುದ್ದಿ: ಮಂಜೇಶ್ವರ: ಅಂತರಾಷ್ಟ್ರೀಯ ಯೋಗಾ ದಿನಾಚರಣೆಯ ಅಂಗವಾಗಿ ವಿದ್ಯಾವರ್ಧಕ ಎ.ಯು.ಪಿ ಶಾಲೆ ಮೀಯಪದವಿನಲ್ಲಿ ಅಂತರಾಷ್ಟ್ರೀಯ ಯೋಗಾಭ್ಯಾಸ ಕಾರ್ಯಕ್ರಮ ಎಂ.ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು. ಶಾಲಾ ಅಧ್ಯಾಪಕ ವಿನಯ್‍ಕೃಷ್ಣ ಎಸ್ ಇವರು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ಹೇಳಿಕೊಟ್ಟು ಯೋಗದ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿಯನ್ನು ಮೂಡಿಸಿದರು. ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ, ಶಾಲಾ ದೈಹಿಕ ಶಿಕ್ಷಕ ಎಸ್.ಎಸ್. ಪ್ರಸಾದ್ ಹಾಗೂ ಶಾಲಾ ಅಧ್ಯಾಪಕ ಅಧ್ಯಾಪಿಕೆಯರು ಪಾಲ್ಗೊಂಡರು.