ಮುಳ್ಳೇರಿಯ: ಸಿ.ಒ.ಡಿ.ಪಿ ಸಂಸ್ಧೆ ಮಂಗಳೂರು ಪ್ರವರ್ತಿತ ಸ್ವ-ಸಹಾಯ ಸಂಘಗಳ ಜಂಟಿ ಆಶ್ರಯದಲ್ಲಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ನಾರಂಪಾಡಿ ಪರಿಸರದಲ್ಲಿ ಜರಗಿತು. ಕಾರ್ಯಕ್ರಮವನ್ನು ಆದರ್ಶ ಮಹಾಸಂಘ ಕುಂಬ್ಡಾಜೆ ಇದರ ಅಧ್ಯಕ್ಷೆ ಐರಿನ್ ಡಿ ಸೋಜ ಉದ್ಘಾಟಿಸಿದರು. ಸ್ವಚ್ಚತೆಯ ಅಗತ್ಯತೆ, ಸ್ವಚ್ಚತೆ ಕೊರತೆಯಿಂದ ಉಂಟಾಗಬಹುದಾದ ರೋಗಗಳು, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಬಗ್ಗೆ ಸಿ.ಒ.ಡಿ.ಪಿ ಸಂಸ್ಧೆ ಸಂಯೋಜಕ ಪೀಟರ್ ಪೌಲ್‍ರವರು ಮಾಹಿತಿ ನೀಡಿದರು. ಬಳಿಕ ನಾರಂಪಾಡಿ ಸಾರ್ವಜನಿಕ ರಸ್ತೆ, ಪರಿಸರ, ಶಾಲಾ ಪರಿಸರವನ್ನು ಕಾರ್ಯಕರ್ತೆ ಸವಿತಾರವರ ನೇತೃತ್ವದಲ್ಲಿ ಸ್ವಚ್ಚತಾ ಅಭಿಯಾನ ನಡೆಸಲಾಯಿತು. ಲೂಸಿಯ ಸ್ವಾಗತಿಸಿ, ಲತಾ ವಂದಿಸಿದರು.