ನವದೆಹಲಿ:ಚುನಾವಣಾ ಬಾಂಡ್ಗಳು ಮತ್ತು ಹಣಕಾಸು ಕಾಯ್ದೆಗೆ ತಿದ್ದುಪಡಿ ಕುರಿತು ತನ್ನ ಬಳಿ ಲಭ್ಯವಿದ್ದ ಎಲ್ಲ ಮಾಹಿತಿಗಳನ್ನು ಆರ್ಟಿಐ ಅಡಿ ಅರ್ಜಿದಾರರಿಗೆ ಒದಗಿಸಲಾಗಿದೆ ಎಂದು ಘೋಷಿಸಿ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ)ವು ಚುನಾವಣಾ ಆಯೋಗಕ್ಕೆ ಆದೇಶಿಸಿದೆ.
ನವದೆಹಲಿ:ಚುನಾವಣಾ ಬಾಂಡ್ಗಳು ಮತ್ತು ಹಣಕಾಸು ಕಾಯ್ದೆಗೆ ತಿದ್ದುಪಡಿ ಕುರಿತು ತನ್ನ ಬಳಿ ಲಭ್ಯವಿದ್ದ ಎಲ್ಲ ಮಾಹಿತಿಗಳನ್ನು ಆರ್ಟಿಐ ಅಡಿ ಅರ್ಜಿದಾರರಿಗೆ ಒದಗಿಸಲಾಗಿದೆ ಎಂದು ಘೋಷಿಸಿ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ)ವು ಚುನಾವಣಾ ಆಯೋಗಕ್ಕೆ ಆದೇಶಿಸಿದೆ.
ಚುನಾವಣಾ ಆಯೋಗವು ಆರ್ಟಿಐ ಕಾಯ್ದೆಯಡಿ ಬಹಿರಂಗಗೊಳಿಸಬಹುದಾದ ಯಾವುದೇ ಹೆಚ್ಚಿನ ಮಾಹಿತಿಯನ್ನು ತಾನು ತಡೆಹಿಡಿದಿಲ್ಲ ಎನ್ನುವುದನ್ನು ನ್ಯಾಯಾಂಗೇತರ ಸ್ಟಾಂಪ್ ಪೇಪರ್ನಲ್ಲಿ ಸ್ಪಷ್ಟಪಡಿಸಬೇಕು ಎಂದು ಸಿಐಸಿ ತನ್ನ ಆದೇಶದಲ್ಲಿ ತಾಕೀತು ಮಾಡಿದೆ.
ಆರ್ಟಿಐ ಕಾರ್ಯಕರ್ತ ಕಮೋಡೋರ್ (ನಿವೃತ್ತ) ಲೋಕೇಶ ಬಾತ್ರಾ ಅವರು ಆರ್ಟಿಐ ಕಾಯ್ದೆಯಡಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿ,2017ರಲ್ಲಿ ಹಣಕಾಸು ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಚುನಾವಣಾ ಬಾಂಡ್ಗಳ ಜಾರಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಒದಗಿಸುವಂತೆ ಕೋರಿದ್ದರು.
ಚುನಾವಣಾ ಆಯೋಗವು ತನ್ನ ದಾಖಲೆಯಲ್ಲಿದ್ದ ವಿವರವಾದ ಟಿಪ್ಪಣಿ ಹಾಳೆ ಮತ್ತು ಪತ್ರ ವ್ಯವಹಾರದೊಂದಿಗೆ ಅವರ ಅರ್ಜಿಗೆ ಉತ್ತರಿಸಿತ್ತು.
ಸಿಐಸಿ ಎದುರು ವಿಚಾರಣೆ ಸಂದರ್ಭ ಬಾತ್ರಾ ಅವರು,ಚುನಾವಣಾ ಆಯೋಗವು ಒದಗಿಸಿರುವ ದಾಖಲೆಗಳು ಉತ್ತರದಲ್ಲಿ ಒದಗಿಸಲಾಗಿರುವ ಕಡತಕ್ಕೆ 'ಲಿಂಕ ಫೈಲ್'ವೊಂದು ಇರುವಂತೆ ತೋರಿಸುತ್ತಿವೆ ಎಂದು ಪ್ರತಿಪಾದಿಸಿದ್ದರು.
ಅವರ ವಾದವನ್ನು ನಿರಾಕರಿಸಿದ್ದ ಚುನಾವಣಾ ಆಯೋಗವು,ಬಾತ್ರಾ ಅವರು ಕೋರಿದ್ದಂತೆ ಎಲ್ಲ ಲಭ್ಯ ದಾಖಲೆಗಳನ್ನು ಈಗಾಗಲೇ ಅವರಿಗೆ ಒದಗಿಸಲಾಗಿದೆ ಎಂದು ತಿಳಿಸಿತ್ತು.
ಆರ್ಟಿಐ ಕಾಯ್ದೆಯಡಿ ಒದಗಿಸಬಹುದಾದ ಲಿಂಕ್ಡ್ ಫೈಲ್/ಭಾಗಶಃ ಫೈಲ್ ಅಥವಾ ವಿಷಯಕ್ಕೆ ಸಂಬಂಧಿಸಿದ ಹೊಸ ಕಡತದಂತಹ ಹೆಚ್ಚಿನ ಮಾಹಿತಿಗಳು ತನ್ನ ಬಳಿಯಲ್ಲಿರುವ ಅಧಿಕೃತ ದಾಖಲೆಗಳಲ್ಲಿ ಲಭ್ಯವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿ ಈ ಆದೇಶವು ತಲುಪಿದ ಮೂರು ವಾರಗಳಲ್ಲಿ,ಅಂದರೆ ಜುಲೈ 15ರೊಳಗೆ ನಾನ್-ಜ್ಯುಡಿಷಿಯಲ್ ಸ್ಟಾಂಪ್ ಪೇಪರ್ನಲ್ಲಿ ಅಫಿಡವಿಟ್ ಸಲ್ಲಿಸುವಂತೆ ಮುಖ್ಯ ಮಾಹಿತಿ ಆಯುಕ್ತ ವೈ.ಕೆ.ಸಿನ್ಹಾ ಅವರು ಚುನಾವಣಾ ಆಯೋಗಕ್ಕೆ ನಿರ್ದೇಶ ನೀಡಿದ್ದಾರೆ. ಇದಕ್ಕೆ ವಿಫಲಗೊಂಡರೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆಯನ್ನೂ ನೀಡಿದ್ದಾರೆ.