HEALTH TIPS

ಫ್ಯಾಷನ್​ ಜಗತ್ತಿಗೆ ಸೆಡ್ಡು ಹೊಡೆದ ಈ ಯುವಕನ ರ‍್ಯಾಂಪ್​ ವಾಕ್ ವಿಡಿಯೋ ವೈರಲ್​​!

              ನವದೆಹಲಿ: ಫ್ಯಾಷನ್​​ ಎಂದಾಕ್ಷಣ ಬಣ್ಣ ಬಣ್ಣದ ಬಟ್ಟೆ ಧರಿಸುವ ಮಹಿಳೆಯರೇ ನೆನಪಾಗುತ್ತಾರೆ. ಫ್ಯಾಷನ್​ ಹೆಸರಿನಲ್ಲಿ ಇಂದಾಗುತ್ತಿರುವ ಬೆಳವಣಿಗೆಗಳು ಒಂದೆರಡಲ್ಲ. ಟಿವಿಗಳಲ್ಲಿ ಇದಕ್ಕೆಂದೇ ಪ್ರತ್ಯೇಕ ಹಲವು ಚಾನೆಲ್​​ಗಳೆ ಇವೆ. ಇವುಗಳನ್ನು ನೋಡುವವರ ಸಂಖ್ಯೆಯೂ ಅಧಿಕವಿದೆ.

          ಇದನ್ನೇ ಬಂಡವಾಳ ಮಾಡಿಕೊಂಡ ಯುವಕನೋರ್ವ ಫ್ಯಾಷನ್​ ಲೋಕವನ್ನೇ ಅಣಕಿಸುವಂತಹ ವಿಡಿಯೋ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿರುವುದಲ್ಲದೇ, ನೆಟ್ಟಿಗರನ್ನೂ ಸಹ ನಗೆ ತರಿಸಿದೆ.


             ಒಂದಷ್ಟು ಯುವತಿಯರು ಚಿತ್ರ ವಿಚಿತ್ರವಾದ ಬಟ್ಟೆ ಧರಿಸಿ ರ‍್ಯಾಂಪ್ ಮೇಲೆ ನಡೆದುಕೊಂಡು ಬರುತ್ತಿದ್ದರೆ, ಅದನ್ನು ನೋಡುವ ಒಂದಷ್ಟು ಜನರು ಅಲ್ಲೇ ಕುಳಿತಿರುತ್ತಾರೆ. ಇವಿಷ್ಟೂ ಕಣ್ಣ ಮುಂದೆ ಬಂದು ಹೋಗುತ್ತವೆ. ಸದ್ಯ ಈ ಯುವಕ ಮಾಡಿರುವ ನಕಲನ್ನು ನೋಡಿದವರಿಗೆ ನಗು ಬರುವುದಂತೂ ಸತ್ಯ.

           ಆದರೆ ಇದೇ ರೀತಿಯ ಫ್ಯಾಷನ್​ ಮಾಡಿರುವ ಯುವಕನ ವಿಡಿಯೋ ಈಗ ಭಾರೀ ವೈರಲ್​ ಆಗುತ್ತಿದೆ. ಮಾಡೆಲ್​​ಗಳು ಯಾವ ರೀತಿ ಬಟ್ಟೆ ಧರಿಸಿ, ನಂತರ ಹೇಗೆ ನಡೆಯುತ್ತಾರೆ ಎಂಬುದನ್ನು ಯುವಕನೋರ್ವ ಮಾಡಿರುವ ವಿಡಿಯೋ ಹಾಸ್ಯಾಸ್ಪದವಾಗಿದ್ದು, ಇದನ್ನು ನೋಡಿದವರು ನಗದೇ ಸುಮ್ಮನೆ ಇರಲು ಸಾಧ್ಯವೇ ಇಲ್ಲ.

             ಈ ವಿಡಿಯೋವನ್ನು ಟ್ವಿಟ್ಟರ್​ ಬಳಕೆದಾರರೊಬ್ಬರು ಶೇರ್​ ಮಾಡಿಕೊಂಡಿದ್ದು, ಈವರೆಗೂ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಯಾವ ಮಾಡೆಲ್​ ಕಮ್ಮಿ ಇಲ್ಲ ಎಂಬುವಂತೆ ನಕಲು ಮಾಡಿರುವ ಈ ಯುವಕನ ಪ್ರತಿಭೆಗೂ ಮೆಚ್ಚುಗೆ ವ್ಯಕ್ತವಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries