ಆಲಪ್ಪುಳ: ರ್ಯಾಲಿಯಲ್ಲಿ ದ್ವೇಷದ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ರಾಜ್ಯ ನಾಯಕನನ್ನು ಕಸ್ಟಡಿಗೆ ನೀಡಲಾಗಿದೆ. ಪಾಪ್ಯುಲರ್ ಫ್ರಂಟ್ ರಾಜ್ಯ ಖಜಾಂಚಿ ಕೆ. ಎಚ್.ನಾಸರ್ ಅವರನ್ನು ರಿಮಾಂಡ್ ಮಾಡಲಾಗಿದೆ. ನಿನ್ನೆ ಈ ಪ್ರಕರಣದಲ್ಲಿ ನಾಸರ್ ನನ್ನು ಅಲಪ್ಪುಳ ಪೋಲೀಸರು ಬಂಧಿಸಿದ್ದರು.
ನಾಸರ್ ಕೂಡ ರ್ಯಾಲಿಯಲ್ಲಿ ಹುಡುಗನನ್ನು ಕರೆಸಿ ಘೋಷಣೆಗಳನ್ನು ಕೂಗಿದ್ದನು. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೋಲೀಸರಿಗೆ ಈ ವಿಷಯ ತಿಳಿದು ಬಂದಿದೆ. ಬಳಿಕ ಆತನನ್ನು ವಶಕ್ಕೆ ಪಡೆಯಲಾಯಿತು. ಹೆಚ್ಚಿನ ವಿಚಾರಣೆ ನಂತರ ಸಂಜೆ ಆತನ ಬಂಧನವನ್ನು ದಾಖಲಿಸಲಾಯಿತು.
ನಾಸರ್ ಜನ ಮಹಾರ್ಯಾಲಿಯ ಮುಖ್ಯ ಸಂಘಟಕರಾಗಿದ್ದನು. ಇದೇ ಹಿನ್ನೆಲೆಯಲ್ಲಿ ಆತನ ಬಂಧನವನ್ನು ದಾಖಲಿಸಲಾಗಿದೆ. ಪ್ರಕರಣದಲ್ಲಿ ಇದುವರೆಗೆ 31 ಮಂದಿಯನ್ನು ಬಂಧಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಯನ್ನು ಬಂಧಿಸುವ ನಿರೀಕ್ಷೆ ಇದೆ.