ಉಪ್ಪಳ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕುರುಡಪದವಿನ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢ ಶಾಲೆಯ ಸಹಕಾರದೊಂದಿಗೆ ನಡೆಸುತ್ತಿರುವ ಮೈಸೂರು ಮಹಾರಾಜರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಜನ್ಮದಿನೋತ್ಸವ ಸಂಭ್ರಮ, ಸಮಾರಂಭ ಇಂದು (ಜೂ.04) ಅಪರಾಹ್ನ 03 ಗಂಟೆಗೆ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢಶಾಲೆ, ಕುರುಡಪದವಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಘಟಕ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸುವರು. ಗ್ರಾ.ಪಂ. ಸದಸ್ಯ ಕೆ..ಸೀತಾರಾಮ ಶೆಟ್ಟಿ ಉದ್ಘಾಟಿಸುವರು. ಸಮಾರಂಭದಲ್ಲಿ
ಮೈಸೂರು ಮಹಾರಾಜರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣ ರಾಜ ಒಡೆಯರ ಬದುಕು, ಅಪೂರ್ವ ಸಾಧನೆ, ಕೊಡುಗೆ ಅವರ ಭವ್ಯ ವ್ಯಕ್ತಿತ್ವದ ಬಗ್ಗೆ ನಿವೃತ್ತ ಪ್ರಾಂಶುಪಾಲ, ಸಾಹಿತಿ ಪ್ರೊ.ಪಿ.ಎನ್.ಮೂಡಿತ್ತಾಯ ಅವರು ಅವಲೋಕನ ಉಪನ್ಯಾಸ ನೀಡುವರು.
ಶಾಲಾ ವ್ಯವಸ್ಥಾಪಕ ಕೆ ಗೋಪಾಲಕೃಷ್ಣ ಭಟ್, ಮುಖ್ಯೋಪಾಧ್ಯಾಯ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ಪಿ.ಬಿ. ಶ್ರೀನಿವಾಸ್ ರಾವ್, ಮುಖ್ಯ ಶಿಕ್ಷಕಿ ಗಾಯತ್ರಿ ಕೆ. ಶುಭಾಶಂಸನೆಗೈಯ್ಯುವರು.