ಕಾಸರಗೋಡು: ನಗರದ ಹೊರವಲಯದ ವಿದ್ಯಾನಗರದಲ್ಲಿ ನೂತನವಾಗಿ ನಿರ್ಮಿಸಿರುವ ವಿದ್ಯುತ್ ಭವನ ಮತ್ತು ಮುಳ್ಳೇರಿಯ ವಿದ್ಯುತ್ ವಿಭಾಗ ಕಚೇರಿಯ ಉದ್ಘಾಟನೆ ಜೂ. 24ರಂದು ಬೆಳಗ್ಗೆ 10.30ಕ್ಕೆ ನಡೆಯಲಿದ್ದು, ಇಂಧನ ಖಾತೆ ಸಚಿವ ಕೆ.ಕೃಷ್ಣನ್‍ಕುಟ್ಟಿ ಉದ್ಘಾಟಿಸುವರು ಎಂದು ಶಾಸಕ ಎನ್.ಎ ನೆಲ್ಲಿಕುನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೇರಳ ಸ್ಟೇಟ್ ಎಲೆಕ್ಟ್ರಿಸಿಟಿ ಬೋರ್ಡ್ ಲಿಮಿಟೆಡ್‍ನ ಉತ್ತರ ಮಲಬಾರ್ ವಲಯ ವಿತರಣಾ ಜಾಲದವ್ಯಾಪ್ತಿಗೆ ಬರುವ ಕಾಸರಗೋಡು ವಿದ್ಯುತ್ ಭವನ ಕಟ್ಟಡ ಮೂರು ಅಂತಸ್ತು ಹೊಂದಿದ್ದು, ಒಟ್ಟು 16,500 ಚದರ ಅಡಿ ವಿಸ್ತೀರ್ಣ ಹೊಂದಿದೆ. ಇದುವರೆಗೆ ಪಿಲಿಕುಂಜೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ವಿದ್ಯುತ್ ಭವನ ಕಾರ್ಯಾಚರಿಸುತ್ತಿತ್ತು. 4.10ಕೋಟಿ ರೂ. ವೆಚ್ಚದಲ್ಲಿ ನೂತನ ವಿದ್ಯುತ್ ಭವನ ನಿರ್ಮಾಣಕಾರ್ಯ ಪೂರ್ತಿಗೊಂಡಿದ್ದು,
ಕೆ.ಎಸ್.ಇ.ಬಿ ಲಿಮಿಟೆಡ್ ಅಧಿಕಾರಿಗಳಾದ ಕಾಸರಗೋಡು ಎಲೆಕ್ಟ್ರಿಕಲ್ ಸರ್ಕಲ್ ಉಪ ಮುಖ್ಯ ಇಂಜಿನಿಯರ್ ಹೈದರಾಲಿ ಟಿ.ಪಿ, ಕಾರ್ಯನಿರ್ವಾಹಕಇಂಜಿನಿಯರ್ ಕರುಣಾಕರನ್ ಕೆ.ಟಿ,
ಕಾರ್ಯನಿರ್ವಾಹಕ ಇಂಜಿನಿಯರ್ ಮಧು ಸೂಧನನ್ ಪಿವಿ, ಹಿರಿಯ ಸೂಪರಿಂಟೆಂಡೆಂಟ್ ಜಲಾಲುದ್ದೀನ್ ಕೆ.ಎಂ, ಸಬ್ ಇಂಜಿನಿಯರ್ ಭಾಗವಹಿಸಿದ್ದರು.