ಮಲಪ್ಪುರಂ: ಮಲಪ್ಪುರಂ ಅಮರಂಬಲಂ ಪಂಚಾಯತಿಯಲ್ಲಿ ಮುಸ್ಲಿಂ ಪ್ರಾರ್ಥನಾ ಮಂದಿರಗಳ ಸ್ಥಿತಿಗತಿಗಳ ಅವಲೋಕನ ನಡೆಸುವಂತೆ ಜಿಲ್ಲಾಧಿಕಾರಿಗೆ ಹೈಕೋರ್ಟ್ ಸೂಚಿಸಿದೆ.
ವಾಣಿಜ್ಯ ಕಟ್ಟಡಗಳನ್ನು ಪ್ರಾರ್ಥನಾ ಮಂದಿರಗಳಾಗಿ ಪರಿವರ್ತಿಸಲಾಗಿದೆಯೇ ಎಂಬುದನ್ನು ಸಹ ಪರಿಶೀಲಿಸಲು ಸೂಚಿಸಲಾಗಿದೆ.
ಹಲವಾರು ಮುಸ್ಲಿಂ ಪ್ರಾರ್ಥನಾ ಮಂದಿರಗಳು ಈಗಾಗಲೇ ಇಲ್ಲಿರುವುದರ ಮಧ್ಯೆ ಮತ್ತೆ-ಮತ್ತೆ ಮಸೀದಿಯನ್ನು ರ್ನಿರ್ಮಿಸುವಂತೆ ಮುಸ್ಲಿಂ ಸಂಘಟನೆಗಳು ಬೇಡಿಕೆ ಸಲ್ಲಿಸುತ್ತಿವೆ. ಈ ಬಗೆಗಿನ ಬೇಡಿಕೆಯ ಅರ್ಜಿಗಳನ್ನು ಇತ್ತೀಚೆಗೆ ಜಿಲ್ಲಾಧಿಕಾರಿಗಳು ತಿರಸ್ಕರಿಸಿದ್ದರು.
ಇದರ ವಿರುದ್ಧ ನೂರುಲ್ ಇಸ್ಲಾಂ ಕಲ್ಚರಲ್ ಗ್ರೂಪ್ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ಹೈಕೋರ್ಟ್ ಈ ಆದೇಶ ನೀಡಿದೆ. ಹೊಸ ಮಸೀದಿಗಳನ್ನು ಇನ್ನೂ ನಿರ್ಮಿಸಲು ಅವಕಾಶ ನೀಡಿದರೆ ಈ ಪ್ರದೇಶದ ಸೌಹಾರ್ಧತೆಗೆ ಧಕ್ಕೆಯಾಗಲಿದೆ ಎಂಬ ತನಿಖಾ ಏಜೆನ್ಸಿಗಳ ವರದಿಯ ಅನುಸಾರ ನ್ಯಾಯಾಲಯ ತಡೆ ನೀಡಿದೆ.