ಮುಳ್ಳೇರಿಯ: ಅಡೂರಿನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರವೇಶೋತ್ಸವ ಹಾಗೂ 'ನೃತ್ಯ ಸಂಗೀತ ಶಿಲ್ಪ' ರೂಪಕ ಪ್ರದರ್ಶನ ಬುಧವಾರ ಜರುಗಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಅನೀಸ್ ಜಿ ಮೂಸಾನ್, ಪ್ರಭಾರ ಪ್ರಾಂಶುಪಾಲ ಪ್ರಶಾಂತ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹರೀಶನ್, ವ್ಯಾಪಾರಿ ಮುಖಂಡ ಮೊಯ್ದೀನ್ ಕುಂಞ ಉಪಸ್ಥಿತರಿದ್ದರು.
ಶಾಲೆಯ ಎಲ್ ಕೆ ಜಿ ಮತ್ತು ಯು ಕೆ ಜಿ ಮಕ್ಕಳಿಂದ ಅಭಿನಯ ಗೀತೆ ಸಹಿತ ನೃತ್ಯ ಜರುಗಿತು. ನಂತರ ಶಾಲೆಯ ಸುಮಾರು 26 ಮಕ್ಕಳು ಭಾಗವಹಿಸಿದ್ದ 'ನೃತ್ಯ ಸಂಗೀತ ಶಿಲ್ಪ' ನೃತ್ಯ ರೂಪಕವು ಮಕ್ಕಳಿಗೆ ಖುಷಿ ನೀಡಿತ್ತು.
ಈ ನೃತ್ಯ ರೂಪಕದ ಹಾಡಿನ ರಚನೆಯನ್ನು ಶಿಕ್ಷಕ ಮಾಧವ ತೆಕ್ಕೆಕೆರೆ ಮಾಡಿದ್ದರು. ಶಿಕ್ಷಕರಾದ ಲತೀಶ್ ಹಾಗೂ ಉದಯ ಕುಮಾರ್ ಎಡನೀರು ಅವರು ಸಂಗೀತ ಸಂಯೋಜಿಸಿದ್ದರು. ಗೀತಾಬಾಯಿ ಟೀಚರ್, ರೆಜಿಶಾ ಟೀಚರ್, ಶಿಬಿನಾ ಪುದುಚೇರಿ ಕೊರಿಯೋಗ್ರಫಿ ಮಾಡಿದ್ದರು. ಲತೀಶ್ ಮಾಸ್ತರ್, ಮಾಧವ ಮಾಸ್ತರ್, ಜಯಲಕ್ಷ್ಮಿ ಟೀಚರ್ ಗಾಯನದಲ್ಲಿ ಸಹಕರಿಸಿದ್ದರು.