ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಪಟ್ಟಾಜೆ ವಾರ್ಡ್ ಉಪಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ಕಛೇರಿಯನ್ನು ಪಟ್ಟಾಜೆ ಷಣ್ಮುಖ ನಗರದಲ್ಲಿ ಉದ್ಘಾಟಿಸಲಾಯಿತು. ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಕುಂಞÂ್ಞಕಣ್ಣ ಗುರುಸ್ವಾಮಿ ದೀಪಬೆಳಗಿಸಿದರು.
ಈ ಸಂದಭರ್Àದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ರಾಜ್ಯ ಸೆಲ್ ಕೋರ್ಡಿನೇಟರ್ ಅಶೋಕ್ ಕಲ್ನಾಡ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಂ. ಸುಧಾಮ ಗೋಸಾಡ, ಕಾಸರಗೋಡು ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಪ್ರಧಾನ ಕಾರ್ಯದರ್ಶಿ ಸುನೀಲ್ ಪಿ. ಆರ್., ಅಭ್ಯರ್ಥಿ ಮಹೇಶ್ ವಳಕ್ಕುಂಜ, ಎಸ್‍ಟಿ ಮೋರ್ಛಾ ಜಿಲ್ಲಾ ಅಧ್ಯಕ್ಷ ಈಶ್ವರ ಮಾಸ್ತರ್ ಪೆರಡಾಲ, ಬದಿಯಡ್ಕ ಪಂಚಾಯಿತಿ ಪೂರ್ವ ವಲಯ ಸಮಿತಿ ಅಧ್ಯಕ್ಷ ವಿಜಯ ಸಾಯಿ, ಪಶ್ಚಿಮ ವಲಯ ಸಮಿತಿ ಅಧ್ಯಕ್ಷೆ ಅಶ್ವಿನಿ ಭಟ್, ಪಶ್ಚಿಮ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಮಧುಚಂದ್ರ ಮಾನ್ಯ, ಚುನಾವಣಾ ಸಮಿತಿ ಅಧ್ಯಕ್ಷ ವೆಂಕಪ್ಪ ನಾ0iÀiï್ಕ, ಬ್ಲಾಕ್ ಪಂಚಾಯಿತಿ ಸದಸ್ಯೆ ಜಯಂತಿ ಕುಂಟಿಕಾನ, ಪಂಚಾಯಿತಿ ಸದಸ್ಯರುಗಳಾದ ಶಂಕರ ಡಿ, ಬಾಲಕೃಷ್ಣ ಶೆಟ್ಟಿ, ಸ್ವಪ್ನ, ಸೌಮ್ಯ ಮಹೇಶ್ ನಿಡುಗಳ, ಅನಿತಾ, ಮಾಜಿ ಪಂಚಾಯತಿ ಸದಸ್ಯ ಮಂಜುನಾಥ ಡಿ ಮಾನ್ಯ, ಹಿರಿಯ ಕಾರ್ಯಕರ್ತರಾದ ವೆಂಕಟ್ರಮಣ ಚುಕ್ಕಿನಡ್ಕ ಮೊದಲಾದವರು ಉಪಸ್ಥಿತರಿದ್ದರು.