ಸಮರಸ ಚಿತ್ರಸುದ್ದಿ: ಸಾರಡ್ಕದ ಆರಾಧನಾ ಕಲಾಭವನದಲ್ಲಿ ಮಕ್ಕಳು ಸಂಗೀತ ಕಲೆಯಲ್ಲಿ ಉನ್ನತಿಗೇರಲು 'ಕಲೋನ್ನತಿ' ಕಾರ್ಯಕ್ರಮವನ್ನು ಕವಯತ್ರಿ ಶ್ರೀಕಲಾ ಕಾರಂತ್ ಎರುಂಬು ದೀಪ ಬೆಳಗಿಸಿ ಉದ್ಪಾಟಿಸಿದರು. ಶಿಕ್ಷಕಿ, ವಿದುಷಿ ಗೀತಾ ಸಾರಡ್ಕ, ಕಲಾಭವನದ ಆಡಳಿತಾಧಿಕಾರಿ ಶಂಕರ್ ಸಾರಡ್ಕ, ಶಿಕ್ಷಕ ಶಿವಶಂಕರ್ ಭಟ್ ತಲ್ಪನಾಜೆ, ಶಿಕ್ಷಕಿ ಸುಶೀಲ ಪದ್ಯಾಣ, ವಯಲಿನ್ ವಾದಕಿ ದೀಪ್ತಿ ಕಂಬಾರ್ ಮತ್ತು ಮೃದಂಗ ವಾದಕ ವಿಶ್ವಾಸ್ ಪದ್ಯಾಣ ಉಪಸ್ಥಿತರಿದ್ದರು.