HEALTH TIPS

ಅಫ್ಗಾನಿಸ್ತಾನದ ಸಿಖ್‌, ಹಿಂದೂಗಳಿಗೆ ಭಾರತದ ಇ-ವೀಸಾ

 ನವದೆಹಲಿ: ಕಾಬೂಲ್‌ ಗುರುದ್ವಾರದ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಅಫ್ಗಾನಿಸ್ತಾನದಲ್ಲಿ ವಾಸಿಸುತ್ತಿರುವ ನೂರಕ್ಕೂ ಹೆಚ್ಚು ಸಿಖ್‌ ಮತ್ತು ಹಿಂದೂಗಳಿಗೆ ಕೇಂದ್ರ ಸರ್ಕಾರ ಆದ್ಯತೆಯ ಇ-ವೀಸಾ ನೀಡಿದೆ.

ಈ ಜನರಿಗೆ ಎಲೆಕ್ಟ್ರಾನಿಕ್ ವೀಸಾಗಳನ್ನು ಗೃಹ ವ್ಯವಹಾರಗಳ ಸಚಿವಾಲಯವು ಆದ್ಯತೆಯ ಮೇಲೆ ವಿತರಿಸಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಭಾನುವಾರ ತಿಳಿಸಿವೆ.

ಅಫ್ಘಾನಿಸ್ತಾನದ ರಾಜಧಾನಿಯ ಗುರುದ್ವಾರದ ಮೇಲಿನ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪು ಹೊತ್ತಿದೆ. ಈ ದಾಳಿಯಲ್ಲಿ ಒಬ್ಬ ಸಿಖ್ ಸೇರಿ ಇಬ್ಬರು ಹತರಾಗಿದ್ದು, ಇದು ಪ್ರವಾದಿ ಮಹಮ್ಮದ್‌ರನ್ನು ಬೆಂಬಲಿಸುವ ಕ್ರಿಯೆ ಎಂದು ಉಗ್ರ ಸಂಘಟನೆ ಹೇಳಿಕೊಂಡಿದೆ.

ಕಾಬೂಲ್‌ನ ಬಾಗ್-ಎ ಬಾಲಾ ಪಕ್ಕದ ಗುರುದ್ವಾರ ಕರ್ತೆ ಪರ್ವಾನ್‌ನಲ್ಲಿ ಶನಿವಾರ ಹಲವು ಬಾರಿ ಸ್ಫೋಟಗಳು ಸಂಭವಿಸಿವೆ. ಸ್ಫೋಟಕಗಳಿದ್ದ ವಾಹನವು ಸಿಖ್‌ರ ಆರಾಧನಾ ಸ್ಥಳ ಪ್ರವೇಶಿಸಿದಂತೆ ಅಫ್ಗಾನ್‌ ಭದ್ರತಾ ಸಿಬ್ಬಂದಿ ತಡೆಯುವ ಮೂಲಕ ಭಾರಿ ದುರಂತ ತಪ್ಪಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries