ಜೈಪುರ: ಗೋಡೆಯನ್ನು ಕೊರೆದು, ಹೊದಿಕೆಯನ್ನೇ ಹಗ್ಗವಾಗಿ ಮಾಡಿಕೊಂಡು ಮೂವರು ವಿಚಾರಣಾದೀನ ಕೈದಿಗಳು 12 ಅಡಿ ಕೆಳಗೆ ಜಿಗಿದು ಪರಾರಿಯಾದ ಘಟನೆ ರಾಜಸ್ಥಾನದ ಬಾಂಸವಾಢ ಜಿಲ್ಲಾ ಜೈಲಿನಲ್ಲಿ ನಡೆದಿದೆ.
ಜೈಪುರ: ಗೋಡೆಯನ್ನು ಕೊರೆದು, ಹೊದಿಕೆಯನ್ನೇ ಹಗ್ಗವಾಗಿ ಮಾಡಿಕೊಂಡು ಮೂವರು ವಿಚಾರಣಾದೀನ ಕೈದಿಗಳು 12 ಅಡಿ ಕೆಳಗೆ ಜಿಗಿದು ಪರಾರಿಯಾದ ಘಟನೆ ರಾಜಸ್ಥಾನದ ಬಾಂಸವಾಢ ಜಿಲ್ಲಾ ಜೈಲಿನಲ್ಲಿ ನಡೆದಿದೆ.
ಪ್ರತ್ಯೇಕ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದ ಮೂವರು ವಿಚಾರಣಾದೀನ ಕೈದಿಗಳು ಗುರುವಾರ ನಸುಕಿನ ವೇಳೆ ಪರಾರಿಯಾಗಿದ್ದಾರೆ.
ಆರೋಪಿಗಳು ತಟ್ಟೆಗಳ ಸಹಾಯದಿಂದ ಜೈಲಿನ ಕೊಠಡಿಯ ಕಿಟಕಿಯ ಕೆಳಗಿರುವ ಕೆಲವು ಕಲ್ಲುಗಳನ್ನು ಸಡಿಲಗೊಳಿಸಿದ್ದಾರೆ. ಅಲ್ಲಿಂದ ಸುಮಾರು 12 ಅಡಿ ಗೋಡೆಯನ್ನು ಹಾರಿದ್ದಾರೆ. ನಂತರ ಹೊದಿಕೆಯನ್ನು ಹಗ್ಗದಂತೆ ಮಾಡಿಕೊಂಡು ಹೊರಗಿನ 20 ಅಡಿ ಗೋಡೆಯನ್ನು ದಾಟಿ ಪರಾರಿಯಾಗಿದ್ದಾರೆ ಎಂದು ಜೈಲರ್ ಮಾನ್ ಸಿಂಗ್ ತಿಳಿಸಿದ್ದಾರೆ.
ನಸುಕಿನ ಜಾವ ಸುಮಾರು 2 ಗಂಟೆಯಿಂದ 3 ಗಂಟೆಯ ನಡುವೆ ಈ ಪಲಾಯನ ಕೃತ್ಯ ನಡೆದಿದೆ. ಆರೋಪಿಗಳು ಗೋಡೆ ಕೊರೆದು ತಪ್ಪಿಸಿಕೊಂಡಿರುವ ವಿಚಾರ ಬೆಳಿಗ್ಗೆ 5 ಗಂಟೆಗೆ ಗೊತ್ತಾಗಿದೆ. ತಕ್ಷಣ ಸ್ಥಳೀಯ ಪೊಲೀಸರಿಗೆ ತಿಳಿಸಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಮಾನ್ ಸಿಂಗ್ ವಿವರಿಸಿದ್ದಾರೆ.
ಪರಮೇಶ್ (22), ಕಮಲೇಶ್ (20) ಮತ್ತು ಪ್ರವೀಣ್ (19) ಜೈಲಿನಿಂದ ತಪ್ಪಿಸಿಕೊಂಡಿರುವ ಆರೋಪಿಗಳು.