ನವದೆಹಲಿ: ಸೈನಿಕರ ನೇಮಕಾತಿಯ ಹೊಸ ನೀತಿ 'ಅಗ್ನಿಪಥ ಯೋಜನೆ' ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ. ಇದರ ನಡುವೆಯೇ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಹಾಗೂ ಅಸ್ಸಾಂ ರೈಫಲ್ಸ್ ನೇಮಕಾತಿಯಲ್ಲಿ 'ಅಗ್ನಿವೀರ'ರಿಗೆ ಶೇ 10ರಷ್ಟು ಮೀಸಲಾತಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಸಂಬಂಧ ಕೇಂದ್ರ ಗೃಹ ಇಲಾಖೆಯ ಟ್ವಿಟರ್ ಪುಟದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಮೀಸಲಾತಿ ಮಾತ್ರವಲ್ಲದೆ, ನೇಮಕಾತಿ ವೇಳೆ ಗರಿಷ್ಠ ವಯೋಮಿತಿಯಲ್ಲಿ 'ಅಗ್ನಿವೀರ'ರಿಗೆ ಮೂರು ವರ್ಷಗಳ ಸಡಿಲಿಕೆ ನೀಡಲಾಗುತ್ತದೆ. ಮೊದಲ ಬ್ಯಾಚ್‌ನ 'ಅಗ್ನಿವೀರ'ರಿಗೆ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷಗಳ ವರೆಗೆ ಸಡಿಲಿಕೆ ನೀಡಲಾಗುವುದು ಎಂದೂ ಹೇಳಲಾಗಿದೆ.
ಯುವಕರನ್ನು ಸೇನೆಗೆ ಅಲ್ಪಾವಧಿಗೆ ನೇಮಕ ಮಾಡಿಕೊಳ್ಳುವ 'ಅಗ್ನಿಪಥ ಯೋಜನೆ'ಯನ್ನು ಕೇಂದ್ರ ಸರ್ಕಾರವು ಮಂಗಳವಾರ (ಜೂನ್ 14) ಪ್ರಕಟಿಸಿತ್ತು. ಇದನ್ನು ವಿರೋಧಿಸಿ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.