ಕಾಸರಗೋಡು: ಜಿಲ್ಲಾ ವೈದ್ಯಕೀಯ ಕಛೇರಿ (ಆರೋಗ್ಯ) ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್‍ನ ಆಶ್ರಯದಲ್ಲಿ ಜಿಲ್ಲೆಯ ಮಧ್ಯಮ ಮಟ್ಟದ ಸೇವಾದಾರರಿಗೆ ತರಬೇತಿಯನ್ನು ನಡೆಸಲಾಯಿತು. ಆದ್ರ್ರಂ ಯೋಜನೆಯ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ತರಲಿರುವ ನವ ಕೇರಳ ಕ್ರಿಯಾ ಯೋಜನೆಯ ಎರಡನೇ ಹಂತಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಾಯಿತು. ರಾಷ್ಟ್ರೀಯ ಆರೋಗ್ಯ ಮಿಷನ್ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ.ರಾಮದಾಸ್ ಉದ್ಘಾಟಿಸಿದರು. ಜಿಲ್ಲಾ ಆದ್ರ್ರಂ ನೋಡಲ್ ಅಧಿಕಾರಿ ಡಾ. ವಿ ಸುರೇಶ ಅಧ್ಯಕ್ಷತೆ ವಹಿಸಿದ್ದರು.
ನವ ಕೇರಳ ಕ್ರಿಯಾ ಯೋಜನೆಯು ಜಿಲ್ಲಾ ಕ್ಯಾನ್ಸರ್ ಕೇರ್ ಪೆÇ್ರೀಗ್ರಾಂ, ಹಬ್ ಮತ್ತು ಸ್ಪೋಕ್ ಮಾಡೆಲ್ ಲ್ಯಾಬೋರೇಟರಿ ಸೇವೆಗಳು, ವಾರ್ಷಿಕ ಸಾರ್ವಜನಿಕ ಆರೋಗ್ಯ ತಪಾಸಣೆ, ಆರೋಗ್ಯ ವರ್ಧನೆ ಅಭಿಯಾನಗಳು, ವಿಶೇಷ ಚಿಕಿತ್ಸಾ ಕೇಂದ್ರಗಳು, ಉಪಶಾಮಕ ಆರೈಕೆ, ತಡೆಗಟ್ಟುವಿಕೆ ಸೇರಿದಂತೆ ಹೊಸ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಗುರಿಯನ್ನು ಹೊಂದಿದೆ. ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ವೆಟ್ ಮಿಷನ್ ಮೂಲಕ ಆರೋಗ್ಯ ಸೌಲಭ್ಯಗಳ ನಿರ್ಮಾಣ ಯೋಜನೆಗಳು ಇದರಲ್ಲಿರಲಿದೆ. ಜಿಲ್ಲೆಯಲ್ಲಿ ಹೊಸದಾಗಿ ನೇಮಕಗೊಂಡ ಮಧ್ಯಮ ಮಟ್ಟದ ಸೇವಾ ಪೂರೈಕೆದಾರರ ಮೂಲಕ, ಈ ಪ್ರದೇಶದಲ್ಲಿ ಆರಂಭಿಕ ಚಟುವಟಿಕೆ ಮಾಡುವ ಮೂಲಕ, ರೋಗಗಳ ಆರಂಭಿಕ ಪತ್ತೆ ಮತ್ತು ನಿಖರವಾದ ವರದಿಯನ್ನು ತೀವ್ರಗೊಳಿಸುವ ಗುರಿ ಹೊಂದಲಾಗಿದ್ದು, ಸಾರ್ವಜನಿಕರಿಗೆ ಸಮಗ್ರ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸುವ ಲಕ್ಷ್ಯ ಹೊಂದಿದೆ. ಕಾಞಂಗಾಡು ಜಿಲ್ಲಾ ಆಸ್ಪತ್ರೆಯ ಮನೋವೈದ್ಯ ಡಾ. ಶ್ರೀಜಿತ್ ಕೃಷ್ಣನ್, ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಪಲ್ಮನರಿ ಮೆಡಿಸಿನ್‍ನ ಜೂನಿಯರ್ ಕನ್ಸಲ್ಟೆಂಟ್ ಡಾ. ಕೆ.ಸಿ.ಪ್ರವೀಣ್, ಸಹಾಯಕ ಶಸ್ತ್ರಚಿಕಿತ್ಸಕ ಡಾ ಸುಶೋಬ್ ಕುಮಾರ್, ಉಪಶಾಮಕ ಸಂಯೋಜಕ ಶಿಜಿ ಶೇಖರ್ ಮತ್ತು ಆರ್‍ಬಿಎಸ್‍ಕೆ ಸಂಯೋಜಕಿ ಅನು ಅರವಿಂದನ್ ನೇತೃತ್ವ ವಹಿಸಿದ್ದರು.