ಉಪ್ಪಳ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ರಾಜ್ಯವನ್ನು ಅಧ:ಪತನಕ್ಕೆ ತಳ್ಳಿದೆ. ಮೋಸ ವಂಚನೆ, ಸ್ವಜನ ಪಕ್ಷಪಾತ, ಚಿನ್ನ ಕಳ್ಳ ಸಾಗಾಟ ಎಡರಂಗ ಸÀರ್ಕಾ|ರದ ಕುಲಕಸುಬಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದರು.
ಎಡರಂಗದ ದಬ್ಬಾಳಿಕೆಯ ಪ್ರತೀಕವಾಗಿ ರಾಹುಲ್ ಗಾಂಧಿಯ ಕಚೇರಿ ದ್ವಂಸ ನಡೆದಿದೆ. ಆದರೆ ತಕ್ಕ ಪ್ರತಿಕ್ರಿಯೆ ನೀಡಲು ಸಾಧ್ಯವಾಗದ ಪಕ್ಷವಾಗಿ ಕಾಂಗ್ರೆಸ್ಸ್ ಹೀನಾಯ ಸ್ಥಿತಿ ತಲಪಿದೆ ಎಂದವರು ತಿಳಿಸಿದರು.
ಬಿಜೆಪಿ ಮಂಡಲ ಸಮಿತಿ ಪೈವಳಿಕೆ ಬಾಯಾರು ಪದವಿನಲ್ಲಿ ಹಮ್ಮಿಕೊಂಡ ಜನಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಂದ್ರಶೇಖರ್ ವರ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವಿಜಯ ರೈ, ಅಶ್ವಿನಿ ಪಜ್ವ, ಮುರಳೀಧರ ಯಾದವ್, ಎ ಕೆ ಕಯ್ಯಾರು, ಮಣಿಕಂಠ ರೈ, ಶಂಕರ ನಾರಾಯಣ ಮುಂದಿಲ, ಪ್ರಸಾದ್ ರೈ, ಯಾದವ ಬಡಾಜೆ, ಪುಷ್ಪಲಕ್ಡ್ಮಿ, ತುಳಸಿ ವರ್ಕಾಡಿ, ಕೆ.ವಿ. ಭಟ್, ಮಂಜುನಾಥ್, ಧನುಷ್ ಬಾಯಾರು, ಸತ್ಯಶಂಕರ್ ನೇತೃತ್ವ ನೀಡಿದರು. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಸದಾಶಿವ ಚೇರಾಲು ವಂದಿಸಿದರು.