ಕಾಸರಗೋಡು: ಹಲವು ವರ್ಷಗಳ ಇತಿಹಾಸವಿರುವ ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್‍ಗೆ ರಾಷ್ಟ್ರೀಯ ಸಹಕಾರಿ ಅರ್ಬನ್ ಬ್ಯಾಂಕ್‍ಗಳ ಒಕ್ಕೂಟದ ವತಿಯಿಂದ ರಾಷ್ಟ್ರೀಯ ಪ್ರಶಸ್ತಿ
ಲಭಿಸಿದ್ದು, ಇತ್ತೀಚೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಅರ್ಬನ್ ಬ್ಯಾಂಕ್‍ಗಳ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಸಮಾವೇಶ ಉದ್ಘಾಟಿಸಿ ಪ್ರಶಸ್ತಿಪ್ರದಾನ ನಡೆಸಿದರು. 'ನಾಫ್‍ಕಬ್'ಅಧ್ಯಕ್ಷ ಜ್ಯೋತೀಂದ್ರ ಮೆಹ್ತಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಸಹಕಾರ ಖಾತೆ ರಾಜ್ಯ ಸಚಿವ ಬಿ.ಎಲ್.ವರ್ಮಾ, ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ.ಭಾಗವತ್ ಕೆ.ಕಾರಟ್ ಉಪಸ್ಥಿತರಿದ್ದರು. ಕಾಸರಗೋಡು ಟೌನ್‍ಬ್ಯಾಂಕ್ ನಿರ್ದೇಶಕ ವಕೀಲ ಕರುಣಾಕರನ್ ನಂಬ್ಯಾರ್ ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರ ಸಹಕಾರಿ ಇಲಾಖೆ ಕಾರ್ಯದರ್ಶಿ ಜ್ಞಾನೇಶ್ ಕುಮಾರ್ ಐಎಎಸ್, ರಿಸರ್ವ್ ಬ್ಯಾಂಕ್ ನಿರ್ದೇಶಕ ಸತೀಶ್ ಮರಾಠೆ, ಎನ್‍ಸಿಯುಐ ಅಧ್ಯಕ್ಷ ದಿಲೀಪ್ ಬಾಯಿ ಸಂಘಾನಿ, ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ಡಿಎನ್ ಠಾಕೂರ್ ಉಪಸ್ಥಿತರಿದ್ದರು.