ಕುಂಬಳೆ: ಅಂಬಿಲಡ್ಕ ವನಿತಾ ಸೇವಾ ಸಹಕಾರಿ ಸಂಘದ 2022- 2027ರ ವರೆಗಿನ ಅವಧಿಗೆ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು. ಒಟ್ಟು 9 ಮಂದಿ ಪದಾಧಿಕಾರಿಗಳು ಆಯ್ಕೆ ಆಗಿದ್ದು ರವಿಕಲಾ ಎಸ್ ಶೆಟ್ಟಿ ಅಧ್ಯಕ್ಷರಾಗಿಯೂ ಪ್ರೇಮಲತಾ ಆಳ್ವ ಉಪಾಧ್ಯಕ್ಷೆಯಾಗಿಯೂ ಆಯ್ಕೆಯಾದರು. ನಿರ್ದೇಶಕರಾಗಿ ಶ್ಯಾಮಲ, ಪುಷ್ಪ, ಗುಲಾಬಿ ಕುಂಟಂಗೇರಡ್ಕ, ಆಶಾ, ಅರುಣ, ನಿಶಾ ಹಾಗೂ ಉಷಾ ನಾರಾಯಣಮಂಗಲ ಆಯ್ಕೆಯಾದರು. ಸಹಕಾರಿ ಇಲಾಖೆಯ ಸಹನೋಂದಣಿ ಅಧಿಕಾರಿಗಳ ಕಛೇರಿ ಅಧಿಕಾರಿಗಳಾದ ರಜಿನಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.