ಪಟ್ನಾ: ಇತಿಹಾಸವನ್ನು ಪುನಾರಚಿಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿ ಬಿಜೆಪಿಯ ಅತಿದೊಡ್ಡ ಮಿತ್ರಪಕ್ಷ ಜೆಡಿಯು ಮುಖ್ಯಸ್ಥ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, 'ಇತಿಹಾಸವನ್ನು ಹೇಗೆ ಬದಲಿಸುತ್ತೀರಿ? ಹಾಗೆ ಮಾಡಲು ಸಾಧ್ಯವೇ!' ಎಂದು ಅಚ್ಚರಿ ವ್ಯಕ್ತಪಡಿಸುತ್ತ ನಗಾಡಿದ್ದಾರೆ.

ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತಿಹಾಸ ಪುನಾರಚಿಸುವ ಬಗ್ಗೆ ಮಾತನಾಡಿದ್ದರು. ಭಾರತದ ಇತಿಹಾಸ ತಜ್ಞರು ಮೊಘಲ್ ಇತಿಹಾಸದ ದಾಖಲೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, ವೈಭವಯುತವಾದ ರಾಜವಂಶಗಳಾದ ಪಾಂಡ್ಯ, ಚೋಳ, ಮೌರ್ಯ, ಗುಪ್ತ ಮತ್ತು ಅಹೋಮ್ ಸಾಮ್ರಾಜ್ಯಗಳನ್ನು ಕಡಣೆಗಣಿಸಿದ್ದರು ಎಂದು ಆರೋಪಿಸಿದ್ದರು.
ಸೋಮವಾರ ನಡೆದ ಸಾರ್ವಜನಿಕ ಸಂವಾದದಲ್ಲಿ ಈ ವಿಚಾರವಾಗಿ ನಿತೀಶ್ ಕುಮಾರ್ ಅವರಿಗೆ ಪ್ರಶ್ನಿಸಿದಾಗ, ಪ್ರತಿಕ್ರಿಯಿಸಲು ಇದೇನು ಪ್ರಮುಖ ವಿಚಾರವಲ್ಲ ಎಂಬಂತೆ ವ್ಯಂಗ್ಯವಾಗಿ ನಗಾಡಿದ್ದಾರೆ.
ನಿತೀಶ್ ಕುಮಾರ್ ಅವರು ಹೆಚ್ಚೇನು ಪ್ರತಿಕ್ರಿಯೆ ನೀಡದೆ ಅಲ್ಲಿಗೆ ಮಾತನ್ನು ನಿಲ್ಲಿಸಿದ್ದಾರೆ. ಆದರೆ ಇತಿಹಾಸ ಪುನಾರಚಿಸುವ ಬಿಜೆಪಿಯ ಪ್ರಯತ್ನಕ್ಕೆ ನಿತೀಶ್ ಕುಮಾರ್ ಅವರ ಸ್ಪಷ್ಟ ತಿರಸ್ಕಾರವಿದು ಎಂದೇ ವಿಶ್ಲೇಷಿಸಲಾಗಿದೆ.