ಮುಳ್ಳೇರಿಯ: ತ್ಯಾಜ್ಯ ಮುಕ್ತ ಪಂಚಾಯತಿ ಎಂಬ ಗುರಿ ಸಾಧಿಸಲು ಮುಳಿಯಾರು ಗ್ರಾಮ ಪಂಚಾಯತಿಯಲ್ಲಿ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ರಿಂಗ್ ಕಾಂಪೋಸ್ಟ್ ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ ವಿತರಣೆ ಉದ್ಘಾಟಿಸಿದರು. ಉಪಾಧ್ಯಕ್ಷ ಎ.ಜನಾರ್ದನನ್ ಅಧ್ಯಕ್ಷತೆ ವಹಿಸಿದ್ದರು. ಸ್ವಚ್ಛತಾ ಮಿಷನ್ ಯೋಜನೆಯಡಿ 13 ಲಕ್ಷ ರೂ.ವೆಚ್ಚದಲ್ಲಿ ರಿಂಗ್ ಕಾಂಪೋಸ್ಟ್ ವಿತರಿಸಲಾಯಿತು. ಪಂಚಾಯಿತಿಯಲ್ಲಿ 488 ಮಂದಿಗೆ 250 ರೂ.ಗಳ ಎರಡು ಕಾಂಪೋಸ್ಟ್ ನೀಡಲಾಗಿದೆ.
ಎಇಒ ಅರುಣ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೈಸಾ ರಶೀದ್, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇ ಮೋಹನನ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅನೀಸ್ ಮನ್ಸೂರ್, ಪಂಚಾಯಿತಿ ಸದಸ್ಯರಾದ ಪಿ ಎಸ್ ಅಬ್ದುಲ್ ಜುನೈದ್, ಅಬ್ಬಾಸ್, ಮಹಮ್ಮದ್ ಕುಂಞÂ್ಞ, ಎಂ ಅನನ್ಯಾ, ಎ ಶ್ಯಾಮತಿ, ನಾರಾಯಣ, ಸಿ ಶ್ಯಾಮಲಾ ಮಾತನಾಡಿದರು.