ಕಾಸರಗೋಡು: ವಾಚನೋತ್ಸವದ ಅಂಗವಾಗಿ ಜಿಲ್ಲಾ ಮಾಹಿತಿ ಕಛೇರಿಯು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಮಲಯಾಳ ವಿಭಾಗದಲ್ಲಿ ಸಾಹಿತ್ಯ ರಸಪ್ರಶ್ನೆ ಸ್ಪರ್ಧೆಯನ್ನು ಜೂನ್ 25 ರಂದು ಆಯೋಜಿಸಲಾಗಿದೆ.
ವಿದ್ಯಾನಗರ ಕಲೆಕ್ಟರೇಟ್‍ನಲ್ಲಿರುವ ಜಿಲ್ಲಾ ಮಾಹಿತಿ ಕಚೇರಿ ಪಿಆರ್‍ಡಿ ಚೇಂಬರ್‍ನಲ್ಲಿ ಬೆಳಗ್ಗೆ 10.30ಕ್ಕೆ ಮಲಯಾಳ ವಿಭಾಗ ಹಾಗೂ ಮಧ್ಯಾಹ್ನ 2.30ಕ್ಕೆ ಕನ್ನಡ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು. ಸ್ಪರ್ಧಿಗಳು ಗುರುತಿನ ಚೀಟಿ ತರಬೇಕು. ಗುರುತಿನ ಪುರಾವೆ ಇಲ್ಲದಿರುವವರು ಶಾಲೆಯ ಪ್ರಾಂಶುಪಾಲರ ಪ್ರಮಾಣಪತ್ರವನ್ನು ಹೊಂದಿರಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 255145)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.