ಮೀರತ್: ನನ್ನನ್ನು ಹತ್ಯೆ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ(ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಗಂಭೀರ ಆರೋಪ ಮಾಡಿದ್ದಾರೆ.
ಮೀರತ್: ನನ್ನನ್ನು ಹತ್ಯೆ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ(ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಗಂಭೀರ ಆರೋಪ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ರೈತರ ಸಭೆಯ ಸಂದರ್ಭ ತಮ್ಮ ಮೇಲೆ ಭಾರತೀಯ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದನ್ನು 'ಅತ್ಯಂತ ವ್ಯವಸ್ಥಿತ ಪಿತೂರಿ' ಎಂದು ರಾಕೇಶ್ ಟಿಕಾಯತ್ ದೂಷಿಸಿದ್ದಾರೆ.
ಮೀರತ್ ಜಿಲ್ಲೆಯ ಜಂಗೇಠಿ ಗ್ರಾಮದ ಧರ್ಮೇಶ್ವರಿ ತೋಟದಲ್ಲಿ ನಡೆದ ಬಿಕೆಯು ಪರಿಶೀಲನಾ ಸಭೆಯಲ್ಲಿ ಮಾತನಾಡಿದ ರಾಕೇಶ್ ಟಿಕಾಯತ್, 'ಸರ್ಕಾರವು ನನ್ನ ಹತ್ಯೆಯನ್ನು ಬಯಸುತ್ತಿದೆ. ಕಾರಣ, ಟಿಕಾಯತ್ ಕುಟುಂಬ ಮತ್ತು ಸಂಘಟನೆಯನ್ನು ಮುರಿಯುವುದಾಗಿದೆ. ಆದರೆ ಇದು ಎಂದಿಗೂ ಸಾಧ್ಯವಿಲ್ಲ' ಎಂದಿದ್ದಾರೆ.
ಮಹಾತ್ಮ ಗಾಂಧಿ ಅವರ ಹತ್ಯೆ ಸಂಚುಕೋರರಿಂದ ನಡೆಯಿತು. ಅದೇ ರೀತಿ ದೇಶದ ಪರವಾಗಿ ಮತ್ತು ರೈತರ ಪರವಾಗಿ ಧ್ವನಿಯೆತ್ತುವ ಜನರನ್ನು ಸಂಚುಕೋರರು ಗುರಿಯಾಗಿಸಿಕೊಂಡಿದ್ದಾರೆ. ಓರ್ವ ಟಿಕಾಯತ್‌ಗೆ ಏನಾದರೂ ಸಂಭವಿಸಿದರೆ ಲಕ್ಷಾಂತರ ಟಿಕಾಯತ್‌ಗಳು ಧ್ವಜವನ್ನು ಹಾರಿಸಲು ಸಿದ್ಧರಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಿಕೆಯು ಒಗ್ಗಟ್ಟನ್ನು ಮುರಿಯಲು ಸಾಕಷ್ಟು ಶ್ರಮವನ್ನು ವ್ಯಯಿಸುತ್ತಿದೆ. ಆದರೆ ಬಿಕೆಯು ಒಗ್ಗಟ್ಟನ್ನು ಮುರಿಯಲು ಸಾಧ್ಯವಿಲ್ಲ ಎಂದು ಟಿಕಾಯತ್ ಒತ್ತಿ ಹೇಳಿದ್ದಾರೆ.