ಕಾಸರಗೋಡು: ವಿಶ್ವ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ಹೊಸದುರ್ಗ ಜನಮೈತ್ರಿ ಪೆÇೀಲೀಸ್ ವತಿಯಿಂದ ಮಾದಕ ವ್ಯಸನ ವಿರುದ್ಧ ಸಮೂಹಿಕ ಪ್ರತಿಜ್ಞೆ ಕಾರ್ಯಕ್ರಮ ನಡೆಯಿತು. ಶಾಸಕ ಇ ಚಂದ್ರಶೇಖರನ್ ಅವರು ಕಾಞಂಗಾಡ್ ಹಳೇ ಬಸ್ ನಿಲ್ದಾಣ ವಠಾರದಲ್ಲಿ ನಡೆದ ಮಾದಕ ವಸ್ತು ವಿರೋಧಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಡಿವೈಎಸ್ಪಿ ಸಿ.ಕೆ.ಸುನೀಲಕುಮಾರ್ ಮಾದಕ ವಸ್ತು ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿದರು. ನಗರಸಭಾ ಕೌನ್ಸಿಲರ್‍ಗಳಾದ ಯು. ಕುಸುಮಂ, ಅಬ್ದುಲ್ ರೆಹಮಾನ್, ಕಾಸರಗೋಡು ಜಿಲ್ಲಾ ಪೆÇಲೀಸ್ ಅಸೋಸಿಯೇಶನ್ ಜಂಟಿ ಕಾರ್ಯದರ್ಶಿ ಟಿ.ಕೆ. ವಿ ಪ್ರಮೋದ್, ಸಹಾಯಕ ಉಪನಿರೀಕ್ಷಕರಾದ ಪಿ. ಕೆ ರಾಮಕೃಷ್ಣನ್, ಕೆ. ಶಶಿಧರನ್ ಇತರ ಜನಪ್ರತಿನಿಧಿಗಳು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ಮಾದಕದ್ರವ್ಯ ವಿರುದ್ಧ ಗಾಳಿಪಟ:
ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಕಾಸರಗೋಡು ಪೆÇಲೀಸ್, ವಿದ್ಯಾರ್ಥಿ ಪೆÇಲೀಸ್ ಕೆಡೆಟ್‍ಗಳ ಸಹಯೋಗದಲ್ಲಿ ಮಾದಕ ವಸ್ತು ವಿರೋಧಿ ಸಂದೇಶಗಳನ್ನು ಒಳಗೊಂಡ ಗಾಳಿಪಟಗಳನ್ನು ಹಾರಿಬಿಡಲಾಯಿತು. ಜಿಲ್ಲಾ ಪೆÇಲೀಸ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು ಗಾಳಿಪಟ ಹಾರಾಟ ಉದ್ಘಾಟಿಸಿದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ ಅಧ್ಯಕ್ಷತೆ ವಹಿಸಿದ್ದರು. ಮಾದಕದ್ರವ್ಯ ವಿರೋಧಿ ಅಭಿಯಾನದ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಹಾಗೂ ಕಿರುಚಿತ್ರೋತ್ಸವದಲ್ಲಿ ವಿಜೇತರಾದವರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಬಹುಮಾನ ವಿತರಿಸಿದರು.