ಪಾಲಕ್ಕಾಡ್: ಒಟ್ಟಪಾಲಂನಲ್ಲಿ ಸರ್ಕಾರ ವಿರುದ್ದ ನಡೆದ ರ್ಯಾಲಿ ಮೇಲೆ ಪೋಲೀಸರು ಲಾಠಿ ಪ್ರಹಾರ ನಡೆಸಿ ನೂರಾರು ಪ್ರತಿಭಟನಾಕಾರರನ್ನು ಟ್ರಕ್ ಮೂಲಕ ಬಂಧಿಸಿದ್ದಾರೆ. ಘರ್ಷಣೆ ವೇಳೆ ಪೆÇ್ರಬೇಷನರಿ ಎಸ್ ಐ ಶಿಜು ಗಾಯಗೊಂಡಿದ್ದಾರೆ.
ಡಿವೈಎಫ್‍ಐನ ಧ್ವಜಸ್ತಂಭ ಮತ್ತು ಪ್ಲೆಕ್ಸ್‍ಗಳನ್ನು ಒಡೆಯಲು ಯತ್ನಿಸಿದಾಗ ಸಂಘರ್ಷಕ್ಕೆ ತಡೆಯೊಡ್ಡಲಾಯಿತು. ಗಾಯಗೊಂಡ ಶೈಜು ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಮಾನದಲ್ಲಿ ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗಿದ ನಂತರ ರಾಜ್ಯಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ಯುವ ಕಾಂಗ್ರೆಸ್ ಕಾರ್ಯಕರ್ತರು ವಿಮಾನದೊಳಗೆ ಪ್ರತಿಭಟನೆ ನಡೆಸುತ್ತಿರುವ ದೃಶ್ಯಾವಳಿಗಳು ಬಹಿರಂಗಗೊಂಡ ನಂತರ ಕೆಪಿಸಿಸಿ ಪ್ರಧಾನ ಕಚೇರಿ ಸೇರಿದಂತೆ ಕಾಂಗ್ರೆಸ್ಸ್ ನ ಕಚೇರಿಗಳಿಗೆ ಸಿಪಿಎಂ ಕಾರ್ಯಕರ್ತರು ದಾಳಿ ನಡೆಸಿದರು. ಮುಖ್ಯಮಂತ್ರಿ ಹತ್ಯೆಗೆ ಯತ್ನಿಸಿದ ಆರೋಪವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹೊರಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ.