ನವದೆಹಲಿ: ಸಚಿವರ ತಂಡ ಜಿಎಸ್ ಟಿ ದರಕ್ಕೆ ಸಂಬಂಧಿಸಿದಂತೆ ಸಭೆ ಮತ್ತೊಂದು ಸಭೆ ನಡೆಸಲಿದ್ದು, ಮಧ್ಯಂತರ ವರದಿ ಸಲ್ಲಿಸಲಿದೆ. ತೆರಿಗೆಯನ್ನು ಆಕರ್ಷಿಸದ ವಸ್ತುಗಳನ್ನು ಜಿಎಸ್ ಟಿ ಪಟ್ಟಿಯಿಂದ ಕೈಬಿಡುವ ಸಂಬಂಧ ಈ ಮಧ್ಯಂತರ ವರದಿ ಸಲ್ಲಿಕೆಯಾಗಲಿದೆ.
ದರ ಪರಿಷ್ಕರಣೆಗಾಗಿ ಜಿಎಸ್ ಟಿ ಪರಿಷತ್ ನಿಂದ ಮಂತ್ರಿಗಳ ಗುಂಪು ನಿಯೋಜನೆಗೊಂಡಿದ್ದು, ಜಿಎಸ್ ಟಿ ದರ ಹಾಗೂ ಸ್ಲ್ಯಾಬ್ ಕುರಿತಂತೆ ಸ್ಪಷ್ಟ ನಿರ್ಧಾರಕ್ಕೆ ಬರಲು ಈ ಹಿಂದಿನ ಸಭೆಯಲ್ಲಿ ಸಾಧ್ಯವಾಗಿರಲಿಲ್ಲ.
ಆದಾಗ್ಯೂ ತೆರಿಗೆಯನ್ನು ಆಕರ್ಷಿಸದ ವಸ್ತುಗಳನ್ನು ಜಿಎಸ್ ಟಿ ಪಟ್ಟಿಯಿಂದ ಕೈಬಿಡುವ ಸಂಬಂಧ ಈ ಮಧ್ಯಂತರ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.
ಶುಕ್ರವಾರದಂದು ನಡೆದ ವರ್ಚ್ಯುಯಲ್ ಸಭೆಯಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದ ಸಮಿತಿ ಜಿಎಸ್ ಟಿ ವಿನಾಯಿತಿ, ದರ ಮರುಪರಿಷ್ಕರಣೆ, ನಡೆಸಿದ್ದು, ವ್ಯಾಲ್ಯೂ ಚೈನ್ ನಲ್ಲಿರುವ ಲೋಪದೋಷಗಳ ಬಗ್ಗೆ ಚರ್ಚೆ ನಡೆಸಿದೆ.