ಕಾಸರಗೋಡು: 'ಆಜಾದಿ ಕಾ ಅಮೃತ್ ಮಹೋತ್ಸವ್' ಅಂಗವಾಗಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನಡೆಸಿದ ವಿಡಿಯೋ ಕಾನ್ಫರೆನ್ಸಿಂಗ್‍ನ ಕಾಸರಗೋಡು ಜಿಲ್ಲಾಮಟ್ಟದ ಪ್ರಸಾರ ಕಾರ್ಯಕ್ರಮ ಸಿವಿಲ್ ಸ್ಟೇಶನ್ ವಠಾರದ ಜಿಪಂ ಸಭಾಂಗಣದಲ್ಲಿ ಜರುಗಿತು.
ಹಿಮಾಚಲ ಪ್ರದೇಶದ ಶಿಮ್ಲಾದಿಂದ ಫಲಾನುಭವಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರಮೋದಿ, ಕಳೆದ ಎಂಟು ವರ್ಷಗಳಲ್ಲಿ ಕಡತಗಳಿಗೆ ಸಹಿ ಮಾಡುವಾಗ ಪ್ರಧಾನಿಯ ಜವಾಬ್ದಾರಿ ಜತೆಗೆ ನನ್ನ ಜೀವನ ದೇಶದ 130 ಕೋಟಿ ಜನತೆಗಾಗಿ ಮೀಸಲಿರಿಸಿರುವುದನ್ನು ಸದಾ ನೆನಪಿನಲ್ಲಿಟ್ಟುಕೊಂಡಿರುವುದಾಗಿ ತಿಳಿಸಿದರು.
ಸಿವಿಲ್‍ಸ್ಟೇಶನ್‍ನ ಪಂಚಾಯಿತಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಕೇಂದ್ರಾವಿಷ್ಕøತ ಯೋಜನೆಗಳ ಜಿಲ್ಲೆಯ 130 ಮಂದಿ ಫಲಾನುಭವಿಗಳು ಭಾಗವಹಿಸಿದ್ದರು. ಎನ್.ಎ ನೆಲ್ಲಿಕ್ಕುನ್ ಎಂ.ಎಲ್.ಎ ಸಮಾರಂಭ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್, ಕಾರಡ್ಕ ಬ್ಲಾಕ್ ಪಂಚಾಯಿತಿ ಸದಸ್ಯ ಎಂ.ಕುಞಂಬು ನಂಬ್ಯಾರ್, ಸ್ವಾತಂತ್ರ್ಯಹೋರಾಟಗಾರ ಕ್ಯಾಪ್ಟನ್ ಕೆ.ಎಂ.ಕುಞÂಕಣ್ಣನ್ ನಂಬ್ಯಾರ್, ಜಿಲ್ಲಾ ವಾರ್ತಾ ಮತ್ತು ಮಾಹಿತಿ ಅಧಿಕಾರಿ ಎಂ.ಮಧುಸೂದನನ್, ಸಹಾಯಕ ನಿರ್ದೇಶಕ ಕೆ.ವಿ ಹರಿದಾಸ್, ಕೇರಳ ಜಲ ಪ್ರಾಧಿಕಾರ ಎಕ್ಸಿಕ್ಯುಟೀವ್ ಇಂಜಿನಿಯರ್ ಕೆ.ಸುದೀಪ್ ಉಪಸ್ಥಿತರಿದ್ದರು. ಸ್ಥಳೀಯಾಡಳಿತ ಸಂಸ್ಥೆ ಸಹಾಐಕ ನಿರ್ದೇಶಕ ಜೇಸನ್ ಮ್ಯಾಥ್ಯೂ ಸ್ವಾಘತಿಸಿದರು. ಜಿಲ್ಲಾ ನಾಘರಿಕ ಪೂರೈಕೆ ಅಧಿಕಾರಿ ಕೆ.ಎನ್ ಬಿಂದು ವಂದಿಸಿದರು.