ಕಾಸರಗೋಡು: ಕೇರಳ ಸ್ಟಾರ್ಟಪ್ ಮಿಷನ್ ಮತ್ತು ಸಿ.ಪಿ.ಸಿ.ಆರ್.ಐ ಕಾಸರಗೋಡು ಸಂಯುಕ್ತವಾಗಿ ಆಯೋಜಿಸುತ್ತಿರುವ ರೂರಲ್ ಇಂಡಿಯಾ ವ್ಯಾಪಾರ ಸಮಾವೇಶ ಶನಿವಾರ ಸಿಪಿಸಿಆರ್‍ಐ ಸಭಾಂಗಣದಲ್ಲಿ ಆರಂಭಗೊಂಡಿತು. ಎರಡು ದಿವಸಗಳ ಕಾಲ ನಡೆಯಲಿರುವ ಶೃಂಗವನ್ನು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನತೆಯನ್ನು ಉದ್ದಿಮೆಯಲ್ಲಿ ತೊಡಗಿಸಿ, ಅವರಿಗೆ ಪ್ರೋತ್ಸಾಹ ನೀಡುವಲ್ಲಿ ಇಂತಹ ಸಮಾವೇಶ ಸಹಕಾರಿಯಾಗಲಿದ್ದು, ನಾಡಿನ ಹೊಸ ಬದಲಾವಣೆಗೆ ಪ್ರಯೋಜನಕಾರಿಯಾಗಲಿರುವುದಾಗಿ ತಿಳಿಸಿದರು. ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಕೇಂದ್ರೀಯ ವಿಶ್ವ ವಿದ್ಯಾಲಯ ಕೇರಳದ ಉಪ ಕುಲಪತಿ ಪ್ರೊ. ವೆಂಕಟೇಶ್ವರಲು ಮುಖ್ಯ ಅತಿಥಿಯಾಘಿ ಭಾಗವಹಿಸಿದ್ದರು. ಕೇರಳ ಸ್ಟಾರ್ಟಪ್‍ಮಿಶನ್ ಹಿರಿಯ ಪ್ರಬಂಧಕ ಅಶೋಕ್ ಕುರಿಯನ್, ತೆಂಗು ಅಭಿವೃದ್ಧೀ ನಿಗಮದ ನಿರ್ದೇಶಕಿ ದೀಪ್ತಿ ಕುರಿಯನ್, ಕೇರಳ ಸ್ಟಾರ್ಟಪ್ ಮಿಶನ್ ಪ್ರೋPಜೆಕ್ಟ್ ಡೈರೆಕ್ಟರ್ ಮಹಮ್ಮದ್ ರಿಯಾಸ್ ಮುಂತಾದವರು ಉಪಸ್ಥಿತರಿದ್ದರು. ಕಲ್ಪ ಅಗ್ರಿ ಬಿಸಿನೆಸ್ ಇನ್‍ಕ್ಯುಬೇಟರ್ ಡಾ. ಮುರಳೀಧರನ್ ರೂರಲ್ ಇಂಡಿಯಾ ಬಿಸಿನೆಸ್ ಕಾನ್‍ಕ್ಲೇವ್ ಬಗ್ಗೆ ಮಾಹಿತಿ ನೀಡಿದರು. ಆರ್.ಐ ನಿರ್ದೇಶಕಿ ಡಾ.ಅನಿತಾ ಕರುಣ್ ಸ್ವಾಗತಿಸಿದರು.
ಅಂತಾರಾಷ್ಟ್ರೀಯ ಮಟ್ಟದ 20ಕ್ಕೂ ಹೆಚ್ಚು ಮಂದಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.ಪ್ರಮುಖ ಹೂಡಿಕೆದಾರರ ಸಾಮಾಜಿಕ ಆಲ್ಫ, ಸ್ಟಾರ್ಟಪ್ ಇಂಡಿಯಾ, ಸೆಂಟ್ರಲ್ ಯೂನಿವರ್ಸಿಟಿ, ಎಲ್.ಬಿ.ಎಸ್ ಇಂಜಿನಿಯರಿಂಗ್ ಕಾಲೇಜ್, ಕೇರಳ ಕೃಷಿ ಕಾಲೇಜು ಮೊದಲಾದ ಪ್ರಮುಖ ಸಂಸ್ಥೆಗಳ ಬೆಂಬಲದೊಂದಿಗೆ ಸಮಾವೇಶ ಆಯೋಜಿಸಲಾಗಿತ್ತು.
ಕಮ್ಮೋಡಿಟಿ ಬೋರ್ಡ್ ಎಕ್ಸಿಕುಟೀವ್ ಮುಖ್ಯಸ್ಥ ವೆಂಕಟೇಶ್ ಹುಬ್ಬಳ್ಳಿ, ಡಾ. ಹೋಮಿಚಿಕ್ಕಣ್ಣ, ಕೇರಳ ಸ್ಟಾರ್ಟಪ್ ಮಿಷನ್ ಸಿ.ಐ.ಒ ಜಾನ್ ಎಂ ಥಾಮಸ್, ಐ.ಸಿ.ಎ.ಆರ್.ಅಸಿಸ್ಟೆಂಟ್ ಡೈರೆಕ್ಟರ್ ಜನರಲ್ ಗಳಾದ ಡಾ.ಬಿ.ಕೆ ಪಾಂಡೆ , ಡಾ. ಕೆ ಶ್ರೀನಿವಾಸ್ , ಅಗ್ರಿ ಇನ್ನೋವೇಟ್ ಸಿ.ಐ.ಒ ಡಾ ಸುಧಾ ಮೈಸೂರ್ ಭಾಗವಹಿಸುತ್ತಿದ್ದಾರೆ.