ಮಂಜೇಶ್ವರ: ಮುಡೂರು ತೋಕೆ ಎಸ್.ಎಸ್.ಎ. ಎಲ್.ಪಿ. ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಭಾಗವಾಗಿ ನವಾಗತರಿಗೆ ಸಾಂತ್ವನ ಸಹೃದಯಿ ಸಂಘಟನೆಯು ಉಚಿತವಾಗಿ ಬ್ಯಾಗ್ ವಿತರಿಸಿತು. ಕಾರ್ಯಕ್ರಮದಲ್ಲಿ ಸಾಂತ್ವನ ಸಂಘಟನೆಯ ಸದಸ್ಯರಾದ ತ್ರಿಶಾಂತ್ ಹಾಗೂ ಸೂರಜ್ ಅವರು ಮಕ್ಕಳಿಗೆ ಬ್ಯಾಗ್ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ರಕ್ಷಕರು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.