ತಿರುವನಂತಪುರ: ರಾಜತಾಂತ್ರಿಕ ಲಗೇಜ್ ಮೂಲಕ ಕರೆನ್ಸಿ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ಗಂಭೀರ ಆರೋಪ ಮಾಡಿದ್ದ ಸ್ವಪ್ನಾ ಸುರೇಶ್ ಹಾಗೂ ಕೇರಳ ಜನಪಕ್ಷದ ನಾಯಕ ಪಿಸಿ ಜಾರ್ಜ್ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸುವಂತೆ ಕಾನೂನು ಸಲಹೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಂಟೋನ್ಮೆಂಟ್ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಷಡ್ಯಂತ್ರದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಕೆ.ಟಿ.ಜಲೀಲ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಕಲಂ 153 ಮತ್ತು 120(ಬಿ) ಅಡಿ ಪ್ರಕರಣ ದಾಖಲಾಗಿದೆ.
ನಿನ್ನೆ ಮೊನ್ನೆಯಷ್ಟೇ ರಾಜತಾಂತ್ರಿಕ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎರ್ನಾಕುಳಂ ಜಿಲ್ಲಾ ನ್ಯಾಯಾಲಯದಲ್ಲಿ ರಹಸ್ಯ ಹೇಳಿಕೆ ನೀಡಿದ ಬಳಿಕ ಸ್ವಪ್ನಾ ಮುಖ್ಯಮಂತ್ರಿ ಹಾಗೂ ಅವರ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಮುಖ್ಯಮಂತ್ರಿ, ಪತ್ನಿ ಕಮಲಾ, ಪುತ್ರಿ ವೀಣಾ, ಮುಖ್ಯಮಂತ್ರಿಗಳ ಸಿಎಂ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸಿ.ಎಂ.ರವೀಂದ್ರನ್, ನಳಿನಿ ನೆಟೊ ಹಾಗೂ ಮಾಜಿ ಸಚಿವ ಕೆ.ಟಿ.ಜಲೀಲ್ ಅವರ ಪಾತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ ಎಂದು ಸಪ್ನಾ ಬಹಿರಂಗಪಡಿಸಿದ್ದರು. ಅದರಲ್ಲಿ ಲೋಹದ ಪೆಟ್ಟಿಗೆಗಳ ಬಗೆಗೂ ಸಪ್ನಾ ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಜಲೀಲ್ ಅವರು ಆರೋಪ ನಿರಾಧಾರ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು.