ಬದಿಯಡ್ಕ: ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಇತ್ತೀಚೆಗೆ ಪುತ್ತೂರು ಸುಬ್ರಹ್ಮಣ್ಯ ಆಚಾರ್ಯ ಅವರ 25ನೇ ಪುಣ್ಯತಿಥಿಯ ಸಂದರ್ಭದಲ್ಲಿ ಅವರ ಮೊಮ್ಮಕ್ಕಳಿಂದ ಭರತನಾಟ್ಯ, ಭೋಜನಕೂಟ ಜರಗಿತು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಆಶೀರ್ವಾದವನ್ನು ಪಡೆದುಕೊಂಡು ಕುಟುಂಬದವರು ಆಶ್ರಮದಲ್ಲಿ ಭೋಜನಕೂಟವನ್ನು ಏರ್ಪಡಿಸಿದ್ದರು. ಮೊಮ್ಮಗ ಗಣೇಶ್ ಕುಮಾರ್ ಮುಂಬೈ ಆಶ್ರಮಕ್ಕೆ ದೇಣಿಗೆಯನ್ನು ನೀಡಿದರು. ಮೊಮ್ಮಗಳು ಪ್ರಸಿದ್ಧ ಭರತನಾಟ್ಯ ಕಲಾವಿದೆ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಶಿಷ್ಯಂದಿರು ಆಶ್ರಮವಾಸಿಗಳ ಮಧ್ಯೆ ಭರತನಾಟ್ಯ ಪ್ರದರ್ಶನ ನೀಡಿ ಗಮನಸೆಳೆದರು. ಆಶ್ರಮದ ಪದಾಧಿಕಾರಿಗಳು, ಹಿತೈಷಿಗಳು ಪಾಲ್ಗೊಂಡಿದ್ದರು.