ಕಾಸರಗೋಡು: 'ನವಕೇರಳ-ಹಸಿರು ಹೊದಿಕೆ' ಜಿಲ್ಲಾ ಮಟ್ಟದ ಉದ್ಘಾಟನೆ ಕಾಸರಗೋಡು ನಗರಸಭೆಯ ವ್ಯಾಪ್ತಿಯ ಸಮುದ್ರ ಕರಾವಳಿಯ ಲೈಟ್ ಹೌಸ್ ಪಾರ್ಕ್‍ನಲ್ಲಿ ಸಸಿಗಳನ್ನು ನೆಡುವ ಮೂಲಕ ನೆರವೇರಿತು.
ಸಮಾರಂಭದಲ್ಲಿ ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿದರು. ಕಾಸರಗೋಡು ನಗರಸಭೆ ವಕೀಲ ವಿ ಯಂ ಮುನೀರ್ ಅಧ್ಯಕ್ಷತೆ ವಹಿಸಿದ್ದರು. ಹಸಿರು ಕೇರಳ ಮಿಷನ್ ಕಾರ್ಡಿನೇಟರ್ ಎಂ ಪಿ ಸುಬ್ರಹ್ಮಣ್ಯನ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್, ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ರಜನಿ, ವಾರ್ಡ್ ಕೌನ್ಸಿಲರ್ ಎಂ ಉಮಾ, ಹಸಿರು ಕೇರಳ ಯೋಜನೆ ಸಂಪನ್ಮೂಲ ವ್ಯಕ್ತಿ ಪಿ ವಿ ದೇವರಾಜನ್, ಶುಚಿತ್ವ ಮಿಶನ್ ಸಂಪನ್ಮೂಲ ವ್ಯಕ್ತಿ ತಾಜುದ್ದೀನ್, ಪರಿಸರ ಕಾರ್ಯಕರ್ತ ಬಶೀರ್, ಹೆಲ್ತ್ ಇನ್‍ಸ್ಪೆಕ್ಟರ್‍ಗಳಾದ ಅನೀಸ್, ರೂಪೇಶ್ ಉಪಸ್ಥಿತರಿದ್ದರು. ನಗರಸಭೆ ಕಾರ್ಮಿಕರು, ಅಯ್ಯಂಗಾಳಿ ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರು ಶುಚೀಕರ ಕಾರ್ಯದಲ್ಲಿ ಸಹಕರಿಸಿದರು. ಈ ಪ್ರದೇಶದಲ್ಲಿ ನಿರ್ಮಿಸಲಾಘುವ ಹಸಿರು ಹೊದಿಕೆ ಪ್ರದೇಶವನ್ನು ಮಾದರಿ ವನವನ್ನಾಗಿ ಮಾಡಲು ನಗರಸಭೆ ಯೋಜನೆ ತಯಾರಿಸಿದೆ. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ಬಾಸ್ ಬೀಗಂ ಸ್ವಾಗತಿಸಿದರು. ನಗರಸಭೆ ಕಾರ್ಯದರ್ಶಿ ಸಿ. ಬಿಜು ವಂದಿಸಿದರು.