ತಿರುವನಂತಪುರ: ಪ್ರತಿಪಕ್ಷ ನಾಯಕ ವಿಡಿ ಸತೀಶನ್ ಅವರನ್ನು ಲೀಡರ್ ಎಂದು ಹೊಗಳಿರುವ ಫ್ಲೆಕ್ಸ್‍ಗಳನ್ನು ತೆಗೆದುಹಾಕಲಾಗಿದೆ. ತಿರುವನಂತಪುರ ನಗರದಲ್ಲಿ ಸತೀಶನ್ ಲೀಡರ್ ಎಂದು ಬರೆದಿದ್ದ ಫ್ಲೆಕ್ಸ್‍ಗಳನ್ನು ಬದಲಾಯಿಸಲಾಗಿದೆ. ವಿ.ಡಿ.ಸತೀಶನ್ ಅವರು ತಾನು ಲೀಡರ್ ಅಲ್ಲ, ಫ್ಲೆಕ್ಸ್ ಗಳನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದ್ದರು. ಇದಾದ ನಂತರ ಫ್ಲೆಕ್ಸ್‍ಗಳನ್ನು ತೆರವು ಮಾಡಲಾಯಿತು.
ತಿರುವನಂತಪುರ ಡಿಸಿಸಿ ಮುಖಂಡರ ನೇತೃತ್ವದಲ್ಲಿ ಫ್ಲೆಕ್ಸ್ ಬೋರ್ಡ್ ಗಳನ್ನು ಹಾಕಲಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ನಾಯಕರು ಸತೀಶನ್ ಅವರಿಗೆ ಅದ್ಧೂರಿ ಸ್ವಾಗತ ನೀಡಿದ್ದರು. ಆದರೆ ಒಂದು ವರ್ಗದ ಮುಖಂಡರು ಇದಕ್ಕೆ ಆಸಕ್ತಿ ತೋರಿಲ್ಲ ಎಂಬ ವರದಿಗಳು ಬಂದಿವೆ. ಇದರ ಬೆನ್ನಲ್ಲೇ ಸ್ವತಃ ವಿರೋಧ ಪಕ್ಷದ ನಾಯಕರೇ ಪ್ರತಿಕ್ರಿಯೆ ನೀಡಿ ಘಟನಾ ವಿವಾದವಾಗದಂತೆ ತೆರೆ ಎಳೆದರು.
ಕೇರಳ ರಾಜಕೀಯದಲ್ಲಿ ಲೀಡರ್ ಪಟ್ಟಕ್ಕೆ ಅರ್ಹರು ಕೆ ಕರುಣಾಕರನ್ ಮಾತ್ರ ಎಂದು ಸತೀಶನ್ ಪ್ರತಿಕ್ರಿಯೆ ನೀಡಿದ್ದಾರೆ. ತಾನು ಲೀಡರ್ ಅಲ್ಲ, ಅ|ಂತಹ ಹೇಳಿಕೆಗೆ ಬಲಿ ಬೀಳುವುದಿಲ್ಲ ಎಂದು ಸತೀಶನ್ ಹೇಳಿದರು. ಕೇವಲ ತನ್ನ ಫ್ಲೆಕ್ಸ್ ಹಾಕುವುದು ಸರಿಯಲ್ಲ ಎಲ್ಲರೂ ಫ್ಲೆಕ್ಸ್ ಹಾಕಬೇಕು ಎಂದು ಒತ್ತಾಯಿಸಿದರು.