ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಗರಸಭೆ ವತಿಯಿಂದ ನಡೆಯುತ್ತಿರುವ ನಿರ್ಮಾಣಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಖಾಸಗಿ ಬಸ್‍ಗಳು ಗುರುವಾರ ಮಧ್ಯಾಹ್ನದಿಂದ ಸಂಚಾರ ಸ್ಥಗಿತಗೊಳಿಸಿ ಮಿಂಚಿನ ಮುಷ್ಕರ ಆರಂಭಿಸಿದೆ. ಬಸ್‍ಮಾಲಿಕರು ಏಕಾಏಕಿ ಕೈಗೊಂಡಿರುವ ಧೋರಣೆಯಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಯಿತು. ಕೆಎಸ್ಸಾರ್ಟಿಸಿ ಸಂಚಾರವಿಲ್ಲದ ರೂಟ್‍ಗಳಲ್ಲಿ ಪ್ರಯಾಣಿಕರು ಪರದಾಡಬೇಕಾಯಿತು.
ಬಸ್ ನಿಲ್ದಾಣ ಎದುರುಭಾಗದಲ್ಲಿ ನಗರಸಭೆ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಮುಂದಾಗಿರುವುದರಿಂದ ಖಾಸಗಿ ಬಸ್‍ಗಳಿಗೆ ನಿಲ್ದಾಣದಲ್ಲಿ ಪಾರ್ಕಿಂಗ್‍ಗೆ ಸ್ಥಳಾವಕಾಶ ಇಲ್ಲದಾಗಿದೆ. ಈ ಬಗ್ಗೆ ಬಸ್‍ಮಾಲಿಕರ ಸಂಘಟನೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಶಾಪಿಂಗ್ ಕಾಂಪ್ಲೆಕ್ಸ್ ಕಾಮಗಾರಿ ತಕ್ಷಣ ನಿಲುಗಡೆಗೊಳಿಸುವಂತೆ ಆಗ್ರಹಿಸಿ ಬಸ್ ಮಾಲಿಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಕಟ್ಟಡ ಕಾಮಗಾರಿ ನಿಲ್ಲಿಸುವ ವರೆಗೆ ಪ್ರತಿಭಟನೆ ಮುಂದುವರಿಯಲಿರುವುದಾಗಿ ಬಸ್‍ಮಾಲಿಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.