ನವದೆಹಲಿ: ದೂರಸಂಪರ್ಕ ಸೇವೆಯ ಕಂಪೆನಿಗಳನ್ನು ಬದಲಿಸುವ ರೀತಿಯಲ್ಲಿಯೇ ವಿದ್ಯುತ್ ಪೂರೈಕೆ ಕಂಪೆನಿಗಳನ್ನು ಬದಲಾಯಿಸುವುದಕ್ಕೆ ಗ್ರಾಹಕರಿಗೆ ಅವಕಾಶ ನೀಡುವ ವಿದ್ಯುತ್ (ತಿದ್ದುಪಡಿ) ಮಸೂದೆ 2021 ಅನ್ನು, ಜುಲೈನಲ್ಲಿ ಆರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ.

ಎಫ್‌ಐಸಿಸಿಐ ಗುರುವಾರ ಆಯೋಜಿ ಸಿದ್ದ ಭಾರತ ವಿದ್ಯುತ್ ಪ್ರಸರಣ ಶೃಂಗಸಭೆ 2022ರಲ್ಲಿ ಕೇಂದ್ರ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ಈ ವಿಷಯ ತಿಳಿಸಿದ್ದಾರೆ.
ಸ್ಪರ್ಧೆಯನ್ನು ಉತ್ತೇಜಿಸಲು ವಿತರಣಾ ವ್ಯವಹಾರವನ್ನು ಡಿ- ಲೈಸನ್ಸ್ ಮಾಡುವ, ಪ್ರತಿ ಆಯೋಗದಲ್ಲಿ ಕಾನೂನು ಹಿನ್ನೆಲೆಯ ಸದಸ್ಯರನ್ನು ನೇಮಿಸುವ, ವಿದ್ಯುತ್ ಮೇಲ್ಮನವಿ ನ್ಯಾಯಮಂಡಳಿಯನ್ನು (ಎಪಿಟಿಇಎಲ್) ಬಲಪಡಿಸುವ ಮತ್ತು ಗ್ರಾಹಕರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿರುತ್ತದೆ ಎಂದು ಸಚಿವರು ಹೇಳಿದ್ದಾರೆ.