ಸೀತಾಮಡಿ: ವೀಸಾ ದಾಖಲೆಯಿಲ್ಲದೆ, ಭಾರತವನ್ನು ನುಸುಳಿ ಸುಮಾರು 15 ದಿನಗಳ ಕಾಲ ರಾಷ್ಟ್ರ ರಾಜಧಾನಿ ವ್ಯಾಪ್ತಿಯ ಪ್ರದೇಶದಲ್ಲಿ ವಾಸವಾಗಿದ್ದ ಚೀನಾದ ಇಬ್ಬರು ನಾಗರಿಕರನ್ನು ಬಿಹಾರದಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹರಕಿಶೋರ್ ರಾಯ್ ತಿಳಿಸಿದ್ದಾರೆ.

ಈ ಬಗ್ಗೆ ಸೋಮವಾರ ಮಾತನಾಡಿದ ಸೀತಾಮಡಿಯ ಎಸ್‌ಪಿ ಹರಕಿಶೋರ್ ರಾಯ್, 'ಬಂಧಿತ ಆರೋಪಿಗಳು ಬಿಹಾರದ ಮೂಲಕ ನೇಪಾಳಕ್ಕೆ ತೆರಳಲು ಯತ್ನಿಸುತ್ತಿದ್ದರು. ಈ ವೇಳೆ ಅವರು ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ) ಸಿಬ್ಬಂದಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಅವರ ಬಳಿ ಚೀನಾದ ಪಾಸ್‌ಪೋರ್ಟ್ ಪತ್ತೆಯಾಗಿದ್ದು, ವೀಸಾಗಳು ಇರಲಿಲ್ಲ. ಜೊತೆಗೆ ಅವರ ಮೊಬೈಲ್ ದತ್ತಾಂಶ ಮತ್ತು ಇತರೆ ಅಂಶಗಳನ್ನು ಪರಿಶೀಲಿಸಿದಾಗ, ಹಣಕಾಸಿನ ವಂಚನೆ ಜಾಲದಲ್ಲೂ ಈ ಇಬ್ಬರ ಪಾತ್ರ ಇರುವ ಬಗ್ಗೆ ಸಾಕ್ಷಿಗಳು ಪತ್ತೆಯಾಗಿದೆ' ಎಂದು ತಿಳಿಸಿದ್ದಾರೆ.