ಕಾಸರಗೋಡು: ನಗರ ಸಭೆಯ ಜಿಲ್ಲಾ ಸೊಳ್ಳೆ ನಿಯಂತ್ರಣ ಘಟಕದ ವತಿಯಿಂದ ಮಲೇರಿಯ ಮಾಸಾಚರಣೆಯ ನಗರಸಭಾ ಮಟ್ಟದ ುದ್ಘಾಟನೆ ಮತ್ತು ಸೊಳ್ಳೆಗಳ ಮೂಲ ನಾಶಕ ಕಾರ್ಯಗಳು ಕಸಬ ಕಡಪ್ಪುರದಲ್ಲಿ ನಡೆಯಿತು. ನಗರಸಭೆಯ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ಬಾಸ್ ಬೀಗಂ ಉದ್ಘಾಟಿಸಿದರು. ನಗರಸಭೆಯ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಕೌನ್ಸಿಲರ್ ಎಂ ಉಮಾ, ವಾರ್ಡ್ ಕೌನ್ಸಿಲರ್‍ಗಳಾದ ಅಜಿತ್ ಕುಮಾರ್, ಮುಸ್ತಾಖ್ ಚೇರಂಗೈ, ಪಾಲಿಕೆ ಕಾರ್ಯದರ್ಶಿ ಎಸ್.ಬಿಜು, ಡಿವಿಸಿ ಘಟಕದ ಬಯಾಲಜಿಸ್ಟ್ ಇ ರಾಧಾಕೃಷ್ಣನ್ ನಾಯರ್ ಉಪಸ್ಥಿತರಿದ್ದರು.
ಡಿ.ವಿ.ಸಿ ಘಟಕದ ನೌಕರರು, ನಗರಸಭೆಯ ಫೀಲ್ಡ್ ವಿಭಾಗದ ನೌಕರರು, ಆಶಾ ವರ್ಕರ್ಸ್, ಮಾಲಿಕ್ ದೀನಾರ್ ನಸಿರ್ಂಗ್ ಕಾಲೇಜು, ಸರ್ಕಾರಿ ಜೆ ಪಿ ಎಚ್ ಎನ್ ಟ್ರೈನಿಂಗ್ ಸ್ಕೂಲ್ ಕಾಸರಗೋಡು ಮತ್ತು ನಜ್‍ಸಿಂಗ್ ವಿದ್ಯಾರ್ಥಿಗಳು, ಎನ್‍ಸಿ ಸಿ ಕೆಡಟ್ಸ್‍ಗಳ ತಂಡಗಳು ಪ್ರದೇಶದ 12 ಗುಂಪುಗಳಾಗಿ ಮನೆ ಸಂಪರ್ಕ ನಡೆಸಿ ಸೊಳ್ಳೆಗಳ ಸಂತತಿ ಬೆಳೆಯಲು ಕಾರಣವಾಗುವ ಮೂಲಗಳ ನಾಶಗೊಳಿಸುವುದರ ಜತೆಗೆ ಮಾಹಿತಿ ನೀಡಲಾಯಿತು. ಫೀಲ್ಡ್ ಚಟುವಟಿ ಹಿನ್ನೆಲೆಯಲ್ಲಿ ಸ್ವಯಂಸೇವಕರಿಗೆ ತರಬೇತಿ ನೀಡಲಾಯಿತು. ನಗರಸಭಾ ಆರೋಗ್ಯ ಮೇಲ್ವಿಚಾರಕ ರಂಜೀತ್ ಕುಮಾರ್, ಡಿವಿಸಿ ಘಟಕದ ಹೆಲ್ತ್ ಸೂಪರ್‍ವೈಸರ್ ಎಂ ವೇಣುಗೋಪಾಲನ್, ಹೆಲ್ತ್ ಇನ್ಸ್‍ಸ್ಪೆಕ್ಟರ್ ಸರಸಿಜನ್ ತಂಬಿ ಸಂದರ್ಶನಕ್ಕೆ ನೇತೃತ್ವ ನೀಡಿದರು.