HEALTH TIPS

ಡೈನೊಸಾರ್ ಮೊಟ್ಟೆಗಳು ಪತ್ತೆ!

 ನವದೆಹಲಿ: ಡೈನೊಸಾರ್​ನ ಒಂದು ಪ್ರಭೇದವಾದ ಟೈಟನೊಸಾರ್​ನ 52 ಮೊಟ್ಟೆಗಳನ್ನು ದೆಹಲಿ ವಿಶ್ವ ವಿದ್ಯಾಲಯದ ಸಂಶೋಧಕರು ಮಧ್ಯ ಪ್ರದೇಶದ ರಾಷ್ಟ್ರೀಯ ಉದ್ಯಾನವನದ ಸಮೀಪ ಪತ್ತೆ ಹಚ್ಚಿದ್ದಾರೆ.

ಆ ಪೈಕಿ ಹತ್ತು ಮೊಟ್ಟೆಗಳು ಒಂದರ ಒಳಗೊಂದು ಸೇರಿಕೊಂಡಿದ್ದು ಒಂದು ಮೊಟ್ಟೆ 'ಅಸಹಜವಾಗಿದೆ' ಎಂದು ಸಂಶೋಧಕರು ಹೇಳಿದ್ದಾರೆ.

ಮಧ್ಯ ಪ್ರದೇಶದ ಧಾರ್ ಜಿಲ್ಲೆಯ ಡೈನೊಸಾರ್ ಪಳೆಯುಳಿಕೆ ರಾಷ್ಟ್ರೀಯ ಪಾರ್ಕ್​ನಲ್ಲಿ ಈ ಮೊಟ್ಟೆಗಳು ಪತ್ತೆಯಾಗಿವೆ. ಟೈಟನಾಸೊರ್​ಗಳು ಸೌರಾಪೋಡ್ ಡೈನೊಸಾರ್​ಗಳ ವಿಶಿಷ್ಟ ಗುಂಪಿಗೆ ಸೇರಿದ್ದಾಗಿದೆ. ನೇಚರ್ ಗ್ರೂಪ್ ಪತ್ರಿಕೆ 'ಸೈಂಟಿಫಿಕ್ ರಿಪೋರ್ಟ್ಸ್'ನಲ್ಲಿ ಈ ಶೋಧನೆಯ ವರದಿ ಪ್ರಕಟವಾಗಿದೆ.

ಡೈನೊಸಾರ್​ನೊಳಗೆ ಮೊಟ್ಟೆಯೊಳಗೆ ಮೊಟ್ಟೆಯ ಅಪರೂಪದ ವಿದ್ಯಮಾನ ಇದೇ ಮೊದಲ ಬಾರಿಗೆ ಕಂಡುಬಂದಿದೆ. ಹಕ್ಕಿಗಳಲ್ಲಿ ಮಾತ್ರ ಈ ರೀತಿ ಆಗುತ್ತದೆಯೇ ಹೊರತು ಸರೀಸೃಪಗಳಲ್ಲಿ ಆಗುವುದಿಲ್ಲ. ಟೈಟನೊಸಾರಿಡ್ ಡೈನೊಸಾರ್​ಗಳ ಮೊಟ್ಟೆಯೊಳಗೆ ಮೊಟ್ಟೆಯ ಈ ವಿದ್ಯಮಾನವು ಅವುಗಳ ಅಂಡನಾಳವು ಹಕ್ಕಿಗಳ ಅಂಡನಾಳದ ಸಂರಚನೆಗೆ ಹೋಲುತ್ತದೆ ಎಂಬುದನ್ನು ಸೂಚಿಸುತ್ತಿದ್ದು ಹೊಸ ಬೆಳಕು ಚೆಲ್ಲಿದೆ. ಇಂಥ ವಿದ್ಯಮಾನವು ಹಕ್ಕಿಗಳಿಗೆ ಮಾತ್ರ ಸೀಮಿತವಲ್ಲ ಎನ್ನುವುದನ್ನು ಅದು ತೋರಿಸಿಕೊಟ್ಟಿದೆ ಎಂದು ಸಂಶೋಧನಾ ವರದಿ ಅಭಿಪ್ರಾಯ ಪಟ್ಟಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries