HEALTH TIPS

ಸೌರಶಕ್ತಿ ಚಾಲಿತ ಎಲೆಕ್ಟ್ರಿಕ್ ಕಾರು ಅಭಿವೃದ್ಧಿಪಡಿಸಿದ ಕೇರಳ ವ್ಯಕ್ತಿ!

        ಕೊಚ್ಚಿ: ಕ್ಯಾಲಿಕಟ್ ಮೂಲದ ಆರ್ ವಿ ಸಲು, ಅಭಿವೃದ್ಧಿಪಡಿಸಿರುವ ಸೌರಶಕ್ತಿ ಚಾಲಿತ ಎಲೆಕ್ಟ್ರಿಕ್  ಕಾರಿನಲ್ಲಿ ಮೈಲಿಗಟ್ಟಲೇ ದೂರ ಚಾಲನೆ ಮಾಡಬಹುದು. ಅದು ರಸ್ತೆಯಲ್ಲಿ ಹೋಗುವಾಗ ಜಾರ್ಜ್ ಮುಗಿದಾಗ ಅವರು ಆತಂಕಪಡಲ್ಲ, ಮೊಬೈಲ್ ನೊಂದಿಗೆ ಅದರ ಮೇಲ್ಛಾವಣಿಯಲ್ಲಿ ಅಳವಡಿಸಿರುವ ಮೂರು ಸೌರ ಫಲಕಗಳಿಂದ ಕಾರು ಬ್ಯಾಟರಿ ಚಾರ್ಜ್ ಆಗುತ್ತದೆ. 

         ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಇಂದಿನ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳು ಜನಪ್ರಿಯವಾಗತೊಡಗಿವೆ.  ಪರಿಸರ ಸ್ನೇಹಿ ಜನರನ್ನು ಪರಿಸರ ಮುಕ್ತ ಶಕ್ತಿಯ ಮೂಲಗಳ ಬಳಕೆಯತ್ತ ತಳಿದ್ದು, ವಿದ್ಯುತ್ ಚಾಲಿತ ವಾಹನಗಳು ಹೆಚ್ಚಾಗುತ್ತಿವೆ. ಆದರೆ, ಜಾರ್ಜಿಂಗ್ ನಿಲ್ದಾಣ ಮತ್ತು ವಿಶೇಷವಾಗಿ ಅಂತರ್ ನಗರ ಡ್ರೈವ್ ನಂತಹ ವೇಳೆಯಲ್ಲಿ ಅದರ ಬ್ಯಾಟರಿ ಚಾರ್ಜ್ ಆಗಲು ಧೀರ್ಘ ಸಮಯ ತೆಗೆದುಕೊಳ್ಳುವುದರಿಂದ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಅನೇಕ ಜನರು ಹಿಂದೇಟು ಹಾಕುತ್ತಿದ್ದಾರೆ. ಆದಾಗ್ಯೂ, ಸಲು ಕಾರು ಬಿಸಿಲಿನ ದಿನಗಳಲ್ಲಿ ಎಂದಿಗೂ ನಿಲಲ್ಲ.

            ಸಲುಗೆ ಬಾಲ್ಯದಿಂದಲೂ ಆಟೋಮೊಬೈಲ್ ಕ್ಷೇತ್ರದಲ್ಲಿ ತುಂಬಾ ಪ್ರೀತಿ. ಮೊದಲ ಲಾಕ್ ಡೌನ್ ಅವಧಿಯಲ್ಲಿ ವಿಂಟೇಜ್ ಕಾರು ತಯಾರಿಸಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಗಿದ್ದರು. ಅವರ ಸೋಲಾರ್ ಕಾರು ಎಸ್ ಆರ್ ವಿ, ತುಂಬಾ ಪ್ರಯೋಗಿಕವಾಗಿ ಆವಿಷ್ಕರಿಸಿದ್ದು, ಜನರು ಹಾಗೂ ಭೂಮಿಗೆ ಪ್ರಯೋಜನವಾಗಿದೆ. 

               ಇದು ಒಂದು ಸೀಟಿನ ಕಾರು ಆಗಿದೆ. ಬ್ಯಾಟರಿ ಚಾರ್ಚ್ ಆತಂಕವಿಲ್ಲದೆ ಡ್ರೈವ್ ಮಾಡಬಹುದಾದ ವಿಶಿಷ್ಠ ಅಂಶದೊಂದಿಗೆ ಈ ಕಾರು ಅಭಿವೃದ್ಧಿಪಡಿಸಲಾಗಿದೆ. 50 ಕಿ.ಮೀ ಡ್ರೈವ್ ಮಾಡಿದ ನಂತರ ಬೈಕ್ ಚಾರ್ಜ್ ಮುಗಿದ ನಂತರ ಅದಕ್ಕೆ ನಾವು ಎಲ್ಲೂ ಚಾರ್ಚ್ ಹಾಕಲು ಆಗಲಿಲ್ಲ. ಕೊನೆಗೆ ಮತ್ತೊಂದು ವಾಹನದೊಂದಿಗೆ ಬೈಕ್ ನ್ನು ತೆಗೆದುಕೊಂಡು ಹೋಗಲಾಯಿತು ಎಂದು ಸೆಲ್ಯೂಲರ್ ಸೇವಾ ಪೂರೈಕೆಯ ತಾಂತ್ರಿಕ ಸಿಬ್ಬಂದಿ ಸಲು ಹೇಳಿದರು. 


            ಮಧ್ಯ ದಾರಿಯಲ್ಲಿ ಜಾರ್ಜ್ ಮುಗಿಯುವ ವಿದ್ಯುತ್ ಚಾಲಿತ ಕಾರನ್ನು ಗಮನದಲ್ಲಿಟ್ಟುಕೊಂಡು ಸೋಲಾರ್ ಮಾದರಿಯನ್ನು ಸಲು ಕಂಡುಹಿಡಿದಿದ್ದಾರೆ.  ಕಾರು ಮೋಟಾರ್ ಗೆ ವಿದ್ಯುತ್ ಪೂರೈಕೆಗಾಗಿ ಲಿಥಿಯಂ ಬ್ಯಾಟರಿ ಬದಲಿಗೆ ಕಡಿಮೆ ವೆಚ್ಚದ ನಾಲ್ಕು ಲೀಡ್ -ಅಸೀಡ್ 12 ವ್ಯಾಟಿನ ಬ್ಯಾಟರಿಯನ್ನು ಅಳವಡಿಸಿದ್ದಾರೆ. ನಂತರ, ಅದನ್ನು ಸೋಲಾರ್ ಫಲಕಗಳೊಂದಿಗೆ ಸಂಪರ್ಕಿಸಿದ್ದಾರೆ. ಇದರಿಂದ ಕಾರು ಇತರ ಸಾಮಾನ್ಯ  ವಿದ್ಯುತ್ ಕಾರುಗಳಿಗೆ ಹೋಲಿಸಿದರೆ 61 ವೊಲ್ಟ್ ನಷ್ಟು ವಿದ್ಯುತ್ ಸಿಗುತ್ತದೆ. 

             ಪಲ್ಸರ್ ಬೈಕಿನ ಶಾಕ್ ಅಬ್ಸರ್ ಬರ್ಸ್, ಮಾರುತಿ 800 ಕಾರಿನ ಸ್ಟೀರಿಂಗ್ ವ್ಹೀಲ್ ಮತ್ತಿತರ ಇತರ ವಾಹನಗಳ ಬಿಡಿಭಾಗಗಳನ್ನು ಬಳಸಿಕೊಂಡು ಕಾರನ್ನು ತಯಾರಿಸಿದ್ದಾರೆ. ಇದರ ವಿನ್ಯಾಸ್ ಏರ್ ಫೋರ್ಟ್ ಗಳಲ್ಲಿ ಲಗ್ಗೇಜು ತೆಗೆದುಕೊಂಡು ಹೋಗುವ ವಾಹನಗಳಂತೆ ಇದೆ.

            ಇದಕ್ಕೆ ನನಗೆ ರೂ. 20,000 ತಗುಲಿದೆ. ಕೆಲವೇ ಕಿಲೋ ಮೀಟರ್ ಗಳಷ್ಟು ಮೈಲೇಜ್ ಕೊಡುವ ವಿದ್ಯುತ್ ಚಾಲಿತ ವಾಹನಗಳಿಗೆ ಜನರು ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡುತ್ತಾರೆ. ಆದರೆ, ಈ ಸೋಲಾರ್ ಕಾರಿನಲ್ಲಿ ಸೂರ್ಯನ ಶಕ್ತಿಯಿಂದ ಹೆಚ್ಚಿನ ದೂರ ಹೋಗಬಹುದಾಗಿದೆ. ಕಡಿಮೆ ವೆಚ್ಚದಲ್ಲಿ ಸದೃಢತೆಯ ಕಾರು ಅಭಿವೃದ್ಧಿಪಡಿಸಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಅವರು ಹೇಳಿದ್ದಾರೆ. 

          ಈ ಕಾರಿನಿಂದ ಸಾಕಷ್ಟು ಪ್ರಮಾಣದ ಇಂಧನ, ಹಣ, ಪರಿಸರ ಸಂರಕ್ಷಣೆಯಾಗಲಿದೆ ಎನ್ನುವ ಸಲು, ಪೆಟೆಂಟ್ ಗಾಗಿ ಕಾಯುತ್ತಿದ್ದು, ಮೂರು ಸೀಟಿನ ಸೋಲಾರ್ ಕಾರು ತಯಾರಿಸುತ್ತೇನೆ. ಪ್ರತಿಯೊಬ್ಬರು ಈ ಕಾರು ಖರೀದಿಸಬಹುದಾಗಿದೆ ಎಂದು ತಿಳಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries