ಕಾಸರಗೋಡು: ಜಿಲ್ಲೆಯ ಬನಗಳನ್ನು ಸಂರಕ್ಷಿಸಿ ಅವುಗಳ ನಿರ್ವಹಣೆಗಾಗಿ ಆರ್ಥಿಕ ಸಹಾಯ ನೀಡಲು ರಾಜ್ಯ ವನ್ಯಜೀವಿ ಇಲಾಖೆಯು ಅರ್ಜಿ ಆಹ್ವಾನಿಸಿದೆ. ಬನಗಳಲ್ಲಿ ಅರಣ್ಯ ಬೆಳೆಸುವುದು, ಜೈವಿಕ ವೈವಿಧ್ಯ ಮುಂತಾದವುಗಳನ್ನು ಪರಿಗಣಿಸಿ ಬನಗಳನ್ನು ಸಂರಕ್ಷಿಸುವ ಕ್ರಿಯಾ ಯೋಜನೆಯನ್ವಯ ಧನಸಹಾಐ ಒದಗಿಸಲಾಗುತ್ತದೆ. ನಿಗದಿತ ದೃಢೀಕರಣದ ಅರ್ಜಿಯೊಂದಿಗೆ ಬನಗಳ ಮಾಲೀಕತ್ವವನ್ನು ಸಾಬೀತುಪಡಿಸುವ ದಾಖಲೆಗಳೊಂದಿಗೆ ಬನದ ರಕ್ಷಣೆಗಾಗಿನ ಕ್ರಿಯಾ ಯೋಜನೆಗಳನ್ನು ಒಳಗೊಂಡಿರಬೇಕಾಗಿದೆ. ಅರ್ಜಿಗಳನ್ನು ಜುಲೈ 31ರ ಮೊದಲು ವಿದ್ಯಾನಗರ ಉದಯಗಿರಿಯಲ್ಲಿರುವ ಸಾಮಾಜಿಕ ರಣ್ಯ ಇಲಾಖೆ ಸಹಾಯಕ ಫೆÇೀರೆಸ್ಟ್ ಕನ್ಸರ್ವೇಟರ್ ಕಚೇರಿಯಲ್ಲಿ ಸ್ವೀಕರಿಸಲಾಗುವುದು. ಈ ಬಗ್ಗೆ ಹೆಚ್ಚಿನ ಮಾಃಇತಿಗೆ ಅರಣ್ಯ ಇಲಾಖೆ ವೆಬ್‍ಸೈಟ್ ಅಥವಾ ದೂರವಾಣಿ ಸಂಖ್ಯೆ(04994-255234)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.