ಕುಂಬಳೆ: ಕುಂಬಳೆ ಪೇಟೆಯ ಅವ್ಯವಸ್ಥೆ ಹಾಗೂ ಪಂಚಾಯಿತಿ ದುರಾಡಳಿತ ವಿರುದ್ಧ ಬಿಎಂಎಸ್ ಕುಂಬಳೆ ಪಂಚಾಯಿತಿ ಸಮಿತಿ ವತಿಯಿಂದ ಪಂಚಾಯಿತಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಯಿತು.
ಕಳೆದ 4 ವರ್ಷಗಳಿಂದ ಕುಂಬಳೆ ಪಂಚಾಯಿತಿಯ ಪ್ರಮುಖ ನಗರವಾದ ಕುಂಬಳೆ ಪೇಟೆಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಇಲ್ಲದೆ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಗರದಲ್ಲಿ ಶೌಚಗೃಹವಿಲ್ಲದಿರುವುದರಿಂದ ನಗರಕ್ಕೆ ಆಗಮಿಸುವ ನೂರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದರೂ, ಆಡಳಿತ ನಡೆಸುವ ಆಡಳಿತಾಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ಧಾರೆ ಎಂದು ಪ್ರತಿಭಟನಾಕಾರರು ದೂರಿದರು.
ಪೇಟೆಯಲ್ಲಿ ಮೂಲಸೌಕರ್ಯ ಒದಗಿಸುವುದರ ಜತೆಗೆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅತೀ ಶಕ್ತವಾದ ಪ್ರತಿಭಟನೆ ನಡೆಸಲಾಗುವುದು ಎಂದುಪ್ರತಿಭಟನಾಕಾರರು ಎಚ್ಚರಿಸಿದರು. ಪಂಚಾಯತ್ ಅಧ್ಯಕ್ಷ ನವಿನಾಕ್ಷ ನಾಯ್ಕಪ್ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯನ್ನು ಬಿಎಂಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ವಿ.ವಿ ಬಾಲಕೃಷ್ಣನ್ ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ದಿನೇಶ್ ಬಂಬ್ರಾಣ. ಹರೀಶ್ ಕುದ್ರೆಪ್ಪಾಡಿ, ವಲಯ ಪದಾಧಿಕಾರಿಗಳಾದ ಐತಪ್ಪ ನಾರಾಯಣಮಂಗಲ, ಬಾಬು ಸೂರಂಬೈಲ್, ವರದರಾಜ್ ಕಳತ್ತೂರು, ವೇಣುಗೋಪಾಲ್ ಮುಗು. ಸಂಜೀವ ಕುಂಟಗೇರಡ್ಕ, ನವೀನ ಕೋಟೆಕ್ಕಾರ್, ಜ್ಯೋತಿ ಕುಂಟಗೇರಡ್ಕ, ರಾಮ ನಾಯ್ಕಾಪು, ಭೋಜರಾಜ್ ಭಜಪ್ಪೆ, ಕೃಷ್ಣ ಕೆ ಮಾವಿನಕಟ್ಟೆ, ವಾಸುದೇವ ಕುಂಟಗೇರಡ್ಕ ಉಪಸ್ಥಿತರಿದ್ದರು.ಪಂಚಾಯಿತಿ ಸಮಿತಿ ಕಾರ್ಯದರ್ಶಿ ವರದರಾಜ್ ಸ್ವಾಗತಿಸಿದರು. ರಾಮಚಂದ್ರ ಪುತ್ತಿಗೆ ವಂದಿಸಿದರು.