ತಿರುವನಂತಪುರ: ಸರ್ಕಾರವನ್ನು ಕಾಂಗ್ರೆಸ್ಸ್ ನಾಯಕ ರಮೇಶ್ ಚೆನ್ನಿತ್ತಲ ತೀವ್ರವಾಗಿ ಟೀಕಿಸಿದ್ದಾರೆ. ಸರ್ಕಾರ ನ್ಯಾಯಾಲಯದ ಆದೇಶವನ್ನು ಹೇಗೆ ಅನುಸರಿಸುತ್ತಿದೆ. ನ್ಯಾಯಾಲಯಕ್ಕೆ ಅವಮಾನವಾಗುತ್ತಿದೆ. ಜನರನ್ನು ಏಕಾಏಕಿ ಅಪಹರಿಸಿ ಕರೆದೊಯ್ಯಲು ಸರ್ಕಾರಕ್ಕೆ ಯಾವ ಅಧಿಕಾರವಿದೆ. ಮುಖ್ಯಮಂತ್ರಿಗಳಿಗೆ ಪ್ರಿಯವಾದದ್ದು ಹಳದಿ ಚಿನ್ನದ ಗಟ್ಟಿ ಮಾತ್ರ ಎಂದು ಟೀಕಿಸಿರುವರು.
ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಮೊದಲ ಆರೋಪಿ ಮುಖ್ಯಮಂತ್ರಿಯಾಗಿದ್ದು, ಬಿರಿಯಾನಿ ಮುಚ್ಚಿಟ್ಟರೂ ಸತ್ಯ ಹೊರಬೀಳಲಿದೆ ಎಂದು ಹೇಳಿದರು. ಪ್ರತಿಪಕ್ಷದ ನಾಯಕನಾಗಿದ್ದಾಗ ನಾನಂದು ಹೇಳಿದ್ದೆಲ್ಲ ಸತ್ಯವಾಗುತ್ತಿದೆ ಎಂದು ಮನವರಿಕೆಯಾಗಿರಬೇಕು ಎಂದು ರಮೇಶ್ ಚೆನ್ನಿತ್ತಲ ಗಮನ ಸೆಳೆದರು.