ಪೆರ್ಲ: ಜೀವನ ಯಾತ್ರೆಯ ನಡುವೆ ಎರಡು ಕಿಡ್ನಿ ಕಳಕೊಂಡು ಅಸೌಖ್ಯಕ್ಕೊಳಗಾಗಿ ಇದೀಗ ಪರಾವಲಂಬಿಯಾಗಿರುವ ಗೃಹಿಣಿಯೋರ್ವರು ಚಿಕಿತ್ಸೆಗಾಗಿ ಉದಾರ ದಾನಿಗಳ ಮೊರೆ ಹೋಗಿದ್ದಾರೆ. ಶೇಣಿ ಸಮೀಪದ ಕೆ.ಕೆ.ಕಾಡು ನಿವಾಸಿ ಕೃಷ್ಣ ನಾಯ್ಕ ಅವರ ಪತ್ನಿ ರತ್ನಾ ಈ ರೀತಿ ಅನಾರೋಗ್ಯದಿಂದ ಯಾತನೆ ಅನುಭವಿಸುವವರಾಗಿದ್ದಾರೆ. ಕಳೆದ 3ವರ್ಷಗಳ ಹಿಂದೆ ಇವರಿಗೆ ರಕ್ತದೋತ್ತಡದ ಏರುಪೇರಿನಿಂದಾಗಿ ವಾತ ರೋಗ ಕಂಡು ಬಂದಿದ್ದು ಇದಕ್ಕಾಗಿ ಕಾಸರಗೋಡಿನ ಖಾಸಗೀ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಯ ಮಧ್ಯೆ ಕಿಡ್ನಿ ಅಸೌಖ್ಯ ಕಂಡು ಬಂದಿತ್ತು. ಪರಿಶೋಧಿಸಿದಾಗ ಎರಡು ಕಿಡ್ನಿಗೂ ಹಾನಿ ಸಂಭವಿಸಿದುದರ ಬಗ್ಗೆ ತಿಳಿದು ಬಂದಿದ್ದು ಇದಕ್ಕಾಗಿ ಹಲವಾರು ರೂ ವ್ಯಯಿಸಿ ಚಿಕಿತ್ಸೆ ನಡೆಸಿದ್ದರು. ಇದೀಗ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ನಡೆಸಬೇಕಾಗಿದ್ದು ಔಷಧ,ವಾಹನ ಖರ್ಚು ಸಹಿತ ಸುಮಾರು 2 ಲಕ್ಷದ ವರೆಗೆ ಹಣ ವ್ಯಯಿಸಿದ್ದಾರೆ. ಇದೀಗ ಇವರ ಬಲ ಕಾಲಿನ ಒಂದು ಭಾಗ ಎಲುಬು ಸವೆದು ಜಾರಿದ್ದು ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ನಿರ್ದೇಶಿಸಿದ್ದಾರೆ. ಮನೆಯಲ್ಲಿ ಪರಾವಲಂಬಿಯಾಗಿರುವ ರತ್ನಾ ಅವರ ಪತಿ ಈ ಹಿಂದೆ ಕೂಲಿ ಕಾರ್ಮಿಕರಾಗಿದ್ದು ಇವರಿಗೂ ವಯೋಸಹಜ ಅಸೌಖ್ಯ ಕಾಡುತ್ತಿದ್ದು ಪತ್ನಿಯನ್ನು ಉಪಚರಿಸಬೇಕಾದ ಹೊಣೆಗಾರಿಕೆಯಿದೆ. ಇವರ ಏಕ ಪುತ್ರಿ ಮಾನ್ಯ ಸಮೀಪಕ್ಕೆ ವಿವಾಹ ಮಾಡಿ ಕೊಡಲಾಗಿದೆ. ವೃದ್ಧಾಪ್ಯದ ನಡುವೆ ಅಸೌಖ್ಯ ಬಾಧಿಸಿದ ಬಡ ದಂಪತಿಗಳು ಇದೀಗ ಹೃದಯವಂತರ ಸಹಾಯ ಯಾಚಿಸುತ್ತಿದ್ದು ದಾನಿಗಳು ಸಂಪರ್ಕ ನಂಬ್ರ 9946452999 ಅಥವಾ ಇವರ ಕೆನರಾ ಬ್ಯಾಂಕಿನ ಪೆರ್ಲ ಶಾಖೆಯ ಖಾತೆ ಸಂಖ್ಯೆ 42132250002301, ಐಎಫ್ ಎಸ್ ಸಿ ಸಿ.ಎನ್.ಆರ್.ಬಿ. 0014213 ನಂಬ್ರಕ್ಕೆ ಸಹಾಯ ನೀಡಬೇಕೆಂದು ವಿನಂತಿದ್ದಾರೆ.