ತಿರುವನಂತಪುರ: ಪಾಪ್ಯುಲರ್ ಪ್ರಂಟ್ ಇಂದು ಇದೀಗ ಮುಖ್ಯಮಂತ್ರಿಗಳ ಅ|ಧಿಕೃತ ನಿವಾಸದ ಎದುರು ನಡೆಸಿದ ಪ್ರತಿಭಟನಾ ಮೆರವಣಿಗೆ ಗದ್ದಲ, ಗೊಂದಲ, ಕೋಲಾಹಲಗಳಿಗೆ ಕಾರಣವಾಯಿತು. ಪಾಪ್ಯುಲರ್ ಪ್ರಂಟ್ ಕಾರ್ಯಕರ್ತರು ಪೋಲೀಸರ ಮೇಲೆ ಬಾಟಲಿ ಹಾಗೂ ಕಲ್ಲು ತೂರಾಟ ನಡೆಸಿದರು. ಇದರೊಂದಿಗೆ ಪ್ರÀತಿಭಟನಾ ಮೆರವಣಿಗೆ ದೊಂಬಿಯಾಗಿ ಮಾರ್ಪಟ್ಟಿತು. ಕಿಳಕ್ಕಾಕೋಟೆಯಿಂದ ಪ್ಲಿಪ್ ಹೌಸ್ ನತ್ತ ಮೆರವಣಿಗೆ ನಡೆಸಿತ್ತು. ಪೋಲೀಸರು ನಿರ್ಮಿಸಿದ್ದ ಬ್ಯಾರಿಕೇಡ್ ಗಳನ್ನು ಕಿತ್ತೆಸೆದ ಪಾಪ್ಯುಲರ್ ಪ್ರಂಟ್ ಕಾರ್ಯಕರ್ತರು ಪೋಲೀಸರ ಮೇಲೆ ಆಕ್ರಮಣಕ್ಕೂ ಯತ್ನಿಸಿದರು. ಇದರಿಂದ ಸಹನೆ ಕಳಕೊಂಡ ಪೋಲೀಸರು ಕೊನೆಗೂ ಜಲಪಿರಂಗಿ ಪ್ರಯೋಗಿಸಿದರು. ಇದರೊಂದಿಗೆ ಗುಂಪುಸೇರಿದ್ದ ಕಾರ್ಯಕರ್ತರು ಪೋಲೀಸರ ಮೇಲೆ ಬಾಟಲಿ, ಕಲ್ಲುಗಳನ್ನು ಅವ್ಯಾಹತವಾಗಿ ಎಸೆರು. ನಿರಂತರ ಜಲಪಿರಂಗಿಗೂ ಉದ್ರಕ್ತರು ತಲೆಬಾಗಲಿಲ್ಲ.
ಆಲಪ್ಪುಳದಲ್ಲಿ ಹತ್ಯೆಯ ಘೋಷಣೆಯ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ನಾಯಕರನ್ನು ಪೋಲೀಸರು ನಿನ್ನೆ ಬಂಧಿಸಿದ್ದರು. ಆದರೆ ಈ ಪ್ರಕರಣದಲ್ಲಿ ರಾಜ್ಯದ ನಾಯಕರನ್ನು ಸಿಲುಕಿಸಲಾಗುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಆರೋಪಿಸಿದೆ. ಇದನ್ನು ವಿರೋಧಿಸಿ ಪಾಪ್ಯುಲರ್ ಫ್ರಂಟ್ ಸಿಎಂ ನಿವಾಸದವರೆಗೆ ಪಾದಯಾತ್ರೆ ನಡೆಸಿತು.
ಪಾಪ್ಯುಲರ್ ಪ್ರಂಟ್ ನಡೆಸುವ ಪ್ರತಿಭಟನಾ ರ್ಯಾಲಿಯಲ್ಲಿ ದಾಳಿ ಹಾಗೂ ವಿಕೋಪಗೊಳ್ಳುವ ಸಾಧ್ಯತೆ ಇದೆ ಎಂದು ಪೋಲೀಸ್ ವರದಿಗಳು ಈ ಹಿಂದೆಯೇ ಸೂಚಿಸಿತ್ತು ಎನ್ನಲಾಗಿದೆ. ಪ್ರತಿಭಟನಾ ಮೆರವಣಿಗೆಯಲ್ಲಿ ಹಲವರು ಕೈಯಲ್ಲಿ ಕಲ್ಲು, ಬಾಟಲಿ ಹಿಡಿದು ಪಾಲ್ಗೊಂಡಿದ್ದರು. ಮೆರವಣಿಗೆಯನ್ನು ಪೋಲೀಸರು ತಡೆದ ತಕ್ಷಣ ಪೋಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಇದರೊಂದಿಗೆ ಉದ್ವಿಗ್ನತೆಯೂ ಉಂಟಾಯಿತು. ಆದರೆ ಜಲಪಿರಂಗಿ ಬಳಸಿದರೂ ಪಾಪ್ಯುಲರ್ ಫ್ರೆಂಡ್ಸ್ ಹಿಂದೆ ಸರಿಯದಿರುವುದು ಕಳವಳಕ್ಕೆ ಕಾರಣವಾಗಿದೆ. ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ರಾಜಧಾನಿಯಲ್ಲಿ ಘರ್ಷಣೆಯನ್ನು ಪ್ರಚೋದಿಸಲು ಪ್ರಯತ್ನಿಸುತ್ತಿರುವುದು ನಿಚ್ಚಳಗೊಂಡಿದೆ.
ಅಲಪ್ಪುಳದಲ್ಲಿ ದ್ವೇಷದ ಘೋಷಣೆಗಳಿಗೆ ಸಂಬಂಧಿಸಿದಂತೆ ನಾಯಕರನ್ನು ಪೋಲೀಸರು ವಶಕ್ಕೆ ತೆಗೆದುಕೊಂಡರೆ, ರಾಜ್ಯದ ಹಲವು ಭಾಗಗಳಲ್ಲಿ ಪಾಪ್ಯುಲರ್ ಪ್ರಂಟ್ ಕಾರ್ಯಕರ್ತರು ಸರ್ಕಾರ ಹಾಗೂ ಪೋಲೀಸರನ್ನು ಬೇಕಾದಂತೆ ಕಾಣಲಿದೆ ಎಂದು ಈ ಹಿಂದೆಯೇ ಎಚ್ಚರಿಸಿತ್ತು. ಕಳೆದ ಕೆಲವು ದಿನಗಳಿಂದ ಪೋಲೀಸರು ಬಂಧಿಸಿರುವ ಪಾಪ್ಯುಲರ್ ಪ್ರಂಟ್ ನೇತಾರರನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಇದು ವಿಫಲವಾದಾಗ, ರಾಜಧಾನಿಯಲ್ಲಿ ಭಯೋತ್ಪಾದನೆಯನ್ನು ಸಂಘಟಿಸಲು ಮತ್ತು ಹರಡಲು ಪ್ರಸ್ತುತ ಪ್ರಯತ್ನವಾಗಿದೆ.