ಬದಿಯಡ್ಕ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂನ್ 21 ನೇ ಮಂಗಳವಾರ ಪಳ್ಳತ್ತಡ್ಕ ಶಾಲೆಯಲ್ಲಿ ಯೋಗ ಗುರು ಪುಂಡರೀಕಾಕ್ಷ ಆಚಾರ್ಯ ಇವರಿಂದ ಮಕ್ಕಳಿಗೆ ಒಂದು ದಿನದ ಯೋಗ ತರಬೇತಿ ನಡೆಯಲಿದೆ. ಇದರ ಮುಂಚೂಣಿಯಾಗಿ ಶುಕ್ರವಾರ ಮಕ್ಕಳಿಗೆ ಪುಂಡರೀಕಾಕ್ಷರವರು ಸರಳ ಯೋಗಗಳ ತರಬೇತಿ ನೀಡಿದರು. ಶ್ಯಾಮಲಾ ಯಸ್.ಯನ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.