ಕುಂಬಳೆ : ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಮಲಯಾಳಂ ದೈನಿಕವೊಂದರಲ್ಲಿ ವ್ಯಂಗ್ಯ ರೀತಿಯಲ್ಲಿ ಪ್ರಕಟಿಸಿದ ವಿರುದ್ಧವಾಗಿ ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ನೇತೃತ್ವದಲ್ಲಿ ಕುಂಬಳೆ ಪೇಟೆಯಲ್ಲಿ ಪತ್ರಿಕೆಯನ್ನು ಸುಟ್ಟು ಹಾಕುವ ಮೂಲಕ ಪ್ರತಿಭಟಿಸಲಾಯಿತು.
ಪ್ರತಿಭಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಕುಂಬಳೆ ಘಟಕದ ಅಧ್ಯಕ್ಷ ಸುಜಿತ್ ರೈ ವಹಿಸಿದ್ದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವ್ ನಾಯ್ಕಾಪು ಅವರು ಉದ್ಘಾಟಿಸಿದರು. ಕುಂಬಳೆ ಮಂಡಲ ಉಪಾಧ್ಯಕ್ಷ ರಮೇಶ್ ಭಟ್, ಪ್ರೇಮಲತಾ ಎಸ್, ಮಂಡಲ ಕಾರ್ಯದರ್ಶಿ ಕೆ. ಸುಧಾಕರ ಕಾಮತ್, ಜನಪ್ರತಿನಿಧಿಗಳಾದ ವಿದ್ಯಾ ಪೈ, ಪ್ರೇಮಾವತಿ, ಪುಷ್ಪಲತಾ ಕಾಜೂರ್, ಅಜಯ ನಾಯ್ಕಾಪು,ಹಿರಿಯರಾದ ಶಶಿ ಕುಂಬಳೆ, ವರುಣ ಕುಮಾರ್, ಮಧುಸೂದನ್ ಕಾಮತ್ ಉಪಸ್ಥಿತರಿದ್ದರು, ಪಂಚಾಯತಿ ಸದಸ್ಯ ಮೋಹನ್ ಬಂಬ್ರಾಣ ಸ್ವಾಗತಿಸಿ, ವಿವೇಕಾನಂದ ಶೆಟ್ಟಿ ವಂದಿಸಿದರು.