ಬದಿಯಡ್ಕ: : ಕೇರಳ ಸ್ಟೇಟ್ ಬಾರ್ಬರ್ ಬ್ಯೂಟಿ ಅಸೋಸಿಯೇಷನ್ ಬದಿಯಡ್ಕ ಬ್ಲಾಕ್ ಸಮಿತಿ ವನಿತಾ ವಿಂಗ್ ನ ಸಮ್ಮೇಳನ ಮಂಗಳವಾರ ಬದಿಯಡ್ಕ ಸಂಸ್ಕøತಿ ಭವನದಲ್ಲಿ ನಡೆಯಿತು.
ವನಿತಾ ವಿಂಗ್ ಜಿಲ್ಲಾ ಅಧ್ಯಕ್ಷೆ ಶಮಾ ನಾಯರ್, ಜಿಲ್ಲಾ ಕಾರ್ಯದರ್ಶಿ ಸುನೀತಾ ಕುಲಾಲ್, ಬಾರ್ಬರ್ ಅಸ|ಓಸಿಯೇಶನ್ ಜಿಲ್ಲಾ ಕಾರ್ಯದರ್ಶಿ ರಮೇಶ್ ನೀಲೇಶ್ವರ ಜಿಲ್ಲಾ ಅಧ್ಯಕ್ಷ ಸೇತು, ಜಿಲ್ಲಾ ಕೋಶಾಧಿಕಾರಿ ಗೋಪಿ ಕಾಸರಗೋಡು, ಜಿಲ್ಲಾ ಉಪಾಧ್ಯಕ್ಷ ಗೋಪಿ ಕುಂಬಳೆ, ಜಿಲ್ಲಾ ಸಂಯೋಜಕ ಸತ್ಯನಾರಾಯಣ ಬದಿಯಡ್ಕ, ಉಪ್ಪಳ ಬ್ಲಾಕ್ ಅಧ್ಯಕ್ಷ ಆಯುಷ ಮಾತನಾಡಿದರು. ಸಭೆಯಲ್ಲಿ ರೀನಾ ಸ್ವಾಗತಿಸಿ, ವಂದಿಸಿದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪುಷ್ಪಾವತಿ ಮಾನ್ಯ (ಅಧ್ಯಕ್ಷೆ), ರೀನಾ ಬದಿಯಡ್ಕ(ಕಾರ್ಯದರ್ಶಿ), ಕಸ್ತೂರಿ ಮುಳ್ಳೇರಿಯ(ಖಜಾಂಜಿ) ಎಂಬವರನ್ನು ಆಯ್ಕೆ ಮಾಡಲಾಯಿತು.