ಅಡಿಮಾಲಿ: ಪ್ರೀತಿಸಿ ಮನನೊಂದು ಬೆಟ್ಟದ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ಯುವತಿಗೆ ಮತ್ತೆ ಜೀವ ತುಂಬಿದ ಆದಿಮಲಿ ಎಸ್ ಐ ಕೆ.ಎಂ.ಸಂತೋಷ್ ಶ್ಲಾಘನೆಗೆ ಒಳಗಾಗಿರುವ ಘಟನೆ ಆದಿಮಲಿ ಸಮೀಪದ ಬುಡಕಟ್ಟು ಗ್ರಾಮದ ಗುಡ್ಡದ ಮೇಲೆ ನಡೆದಿದೆ.
ವಿವಾಹವಾಗುವುದಾಗಿಸ ಭರವಸೆ ನೀಡಿದ್ದ ಪ್ರಿಯಕರ ಹಿಂದೆ ಸರಿದು ಬೇರೊಂದು ಸಂಬಂಧ ಬೆಳೆಸಿದ ಹಿನ್ನೆಲೆಯಲ್ಲಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದಿಮಲಿ ಸಮೀಪದ ಕುತಿರಾಯಲ ಆದಿವಾಸಿ ಕಾಲನಿ ಬಳಿಯ ಬಂಡೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ 27ರ ಹರೆಯದ ಯುವತಿಯನ್ನು ಎಸ್‌ಐ ಕೆ.ಎಂ.ಸಂತೋಷ್ ಒಂದು ಗಂಟೆಯ ನಿರಂತರ ಹೋರಾಟದ ಬಳಿಕ ಕೆಳಗಿಳಿಸಿದ್ದಾರೆ.
ಮೊದಲಿಗೆ ಹುಡುಗಿಯನ್ನು ಮಾತನಾಡಿಸಲು ಪ್ರಯತ್ನಿಸಿದರೂ ಒಪ್ಪಲಿಲ್ಲ. ನಂತರ ಎಸ್‌ಐ ಪ್ರೀತಿ ಮತ್ತು ಸಾಂತ್ವದ ಭಾಷೆಯೊಂದಿಗೆ ಹುಡುಗಿಯನ್ನು ಸಂಪರ್ಕಿಸಿದಾಗ ಅವಳು ಪ್ರತಿಕ್ರಿಯಿಸತೊಡಗಿದಳು. ಅಪಾಯಕಾರಿ ರೀತಿಯಲ್ಲಿ ಜಾರುತ್ತಿದ್ದ ಬಂಡೆಯ ಮೇಲಿಂದ ಇಳಿಯಲು ಎಸ್ ಐ ಎಂ ಸಂತೋಷ್ ಸತತ ಪ್ರಯತ್ನ ಮಾಡಿದರು.
ಮೊದಮೊದಲು ಯಾರ ಮಾತಿಗೂ ಕಿವಿಗೊಡದೆ ಎರಡೂ ಕಿವಿಗಳನ್ನೂ ಕ್ಯೆಯಿಂದ ಮುಚ್ವಿ ಆತ್ಮಹತ್ಯೆಗೆ ಪ್ರಯತ್ನಿಸುವ ರೀತಿಯಲ್ಲಿದ್ದ ಆಕೆಯನ್ನು ರಹದಾರಿ ದೂರದಲ್ಲಿದ್ದ ಎಂ. ಸಂತೋಷ್ ನಿಧಾನವಾಗಿ ಒಡಂಬಡಿಸುತ್ತಾ ‘ ನಿನ್ನ ಸಮಸ್ಯೆಗೆ ಪೂರ್ಣ ಪರಿಹಾರ ಕಲ್ಪಿಸದೆ ಇಲ್ಲಿಂದ ನಾನು ತೆರಳಲಾರೆ, ಕೆಳಗಿಳಿದು ಬಾ ಮಗಳೇ’ ಎಂಬ ದಯಾರ್ದ ಮಾತುಗಳಿಂದ ಮನಸ್ಸು ಕರಗಿದ ಶರಣಾಗಿ ಬಾಲಕಿ ನಂತರ ಕೆಳಗಿಳಿದುಬಂದು ಎಸ್‌ಐ ಆದೇಶವನ್ನು ಪಾಲಿಸಲು ಸಿದ್ಧಳಾದಳು.
‘ಮಗು ನನ್ನ ಮಾತುಗಳನ್ನು ಕೇಳಲು ಸಿದ್ಧವಾದ ತಕ್ಷಣ, ಅವಳು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ನಾನು ಅರಿತುಕೊಂಡೆ. ಆಗ ನನಗೂ ಧೈರ್ಯ ಬಂತು. ಪ್ರೀತಿಯಲ್ಲಿ ಮಾತುಗಳ ಮೋಡಿಯಿಂದ ಅವಳನ್ನು ಕರೆದೆ. ಅವಳು ಬಂದಳು ಎಂದು ಬಳಿಕ ಸುದ್ದಿಗಾರರೊಂದಿಗೆ ಎಸ್‌ಐ ವಿಶದಪಡಿಸಿದರು. ಘಟನೆಯ ನಂತರ ಎಸ್‌ಐ ಮಾತನಾಡಿ, ‘‘ಮಕ್ಕಳನ್ನು ಪ್ರೀತಿಯಿಂದ ನಡೆಸಿಕೊಂಡು ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡರೆ ಯಾರೂ ಆತ್ಮಹತ್ಯೆಯತ್ತ ಮುಖ ಮಾಡುವುದಿಲ್ಲ.ಪೋಷಕರು ಕಾಲಕ್ಕೆ ತಕ್ಕಂತೆ ಬದಲಾಗಬೇಕಾದ ಅನಿವಾರ್ಯತೆ ಇದೆ ಎಂದಿರುವರು. ಇದರೊಂದಿಗೆ ಇನ್ನಷ್ಟು ಮಂದಿ ಎಸ್‌ಐ ಅವರನ್ನು ಕೊಂಡಾಡಿದ್ದು, ಜಾಲತಾಣಗಳಲ್ಲಿ ವ್ಯಾಪಕ ಅಭಿನಂದನೆ,ಶ್ಲಾಘನೆಗಳು ಹರಿದುಬಂದಿದೆ.