ಕುಂಬಳೆ: ಕೇಂದ್ರ ಸರ್ಕಾರದ 8 ಎಂಟನೆ ವರ್ಷದ ಸಾಧನೆಯ ಸಂದÀರ್ಧ ನಾಡಿನೆಲ್ಲಡೆ ನಿಸ್ವಾರ್ಥ ಸೇವೆ, ಸಾಧನೆ ಮಾಡಿದ ಸಮಾಜ ಸೇವಕಿ ಲಕ್ಷ್ಮೀ ಅಮ್ಮ ಕೃಷ್ಣ ನಗರ ಅವರನ್ನು ಬಿಜೆಪಿ ದಕ್ಷಿಣ ವಲಯದ ಅಧ್ಯಕ್ಷ ಸುಜಿತ್ ರೈ ಅವರ ನೇತೃತ್ವದಲ್ಲಿ ಬಿಜೆಪಿ ಕುಂಬಳೆ ಮಂಡಲ ಉಪಾಧ್ಯಕ್ಷೆ ಪ್ರೇಮಲತಾ ಎಸ್.ಗಟ್ಟಿ ಶಾಲುಹೊದೆಸಿ, ಫಲಪುಷ್ಪ ನೀಡಿ ಗೌರವಿಸಿದರು.
ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವ್ ನಾಯ್ಕಾಪು ಮಾತನಾಡಿ, ಲಕ್ಷ್ಮೀ ಅಮ್ಮ ಅವರು ತಮಿಳನಾಡಿನ ಪುದುಕೋಟೆಯ ಆರಂದಾಗಿ ಗ್ರಾಮದವರು. ವೃತ್ತಿಯಲ್ಲಿ ಕೌರಿಕರಾಗಿದ್ದ ಅವರ ಕುಟುಂಬ 1960 ರಲ್ಲಿ ಕುಂಬಳೆಗೆ ಬಂದು ನೆಲಸಿದವರು. ಆ ಕಾಲದಲ್ಲಿ ಆಸ್ಪತ್ರೆ, ವೈದ್ಯರಿಗಳು ವಿರಳವಿದ್ದ ಕಾಲವಾದ್ದರಿಂದ ಬಡವ, ಶ್ರೀಮಂತ, ಜಾತಿ ಮತಗಳನ್ನು ಪರಿಗಣಿಸದೆ ಆ ಪರಿಸರದಲ್ಲಿ 265 ಕ್ಕೂ ಹೆಚ್ಚು ಮಹಿಳೆಯರ ಹೆರಿಗೆ ಮಾಡಿಸಿದ ಮಹಾತಾಯಿಯಾಗಿದ್ದಾರೆ. ಯಾವುದೇ ಫಲಾಪೇಕ್ಷೆಗಳಿಲ್ಲದೆ ದೀನ ದಲಿತರ ಸೇವೆ ದೇವರ ಸೇವೆಯೆಂದು ಭಾವಿಸಿ ಕರ್ತವ್ಯ ನಿರ್ವಹಿಸಿದವರು. ಇವರು ನಾಡಿಗೆ ಹೆಮ್ಮೆ ಎಂದರು.
ಸಮಾರಂಭದಲ್ಲಿ ಹಿರಿಯರಾದ ಗೋಪಾಲ ಕಂಚಿಕಟ್ಟೆ, ಶಶಿ ಕುಂಬಳೆ, ಮುರುಗ್ ಕುಮಾರ್ ಕುಂಬಳೆ, ಜನಪ್ರತಿನಿಧಿಗಳಾದ ಪ್ರೇಮ ಶೆಟ್ಟಿ, ಪ್ರೇಮಾವತಿ, ಸುಲೋಚನ, ವಿವೇಕಾನಂದ ಶೆಟ್ಟಿ ಉಪಸ್ಥಿತರಿದ್ದರು.