ತಿರುವನಂತಪುರ: ಕೇರಳದಲ್ಲಿ ಎಸ್ಸೆಸೆಲ್ಸಿ ಪರೀಕ್ಷಾ ಫಲಿತಾಂಶ ಜೂ. 15ರಂದು ಪ್ರಕಟಗೊಳ್ಳಲಿದೆ. ಮಧ್ಯಾಹ್ನ 3ಕ್ಕೆ ಶಿಕ್ಷಣ ಸಚಿವ ವಿ.ಶಿವನ್‍ಕುಟ್ಟಿ ಫಲಿತಾಂಶ ಪ್ರಕಟಿಸುವರು. ಸಚಿವರು ಫಲಿತಾಂಶ ಘೋಷಿಸಿದ ನಂತರ ಔದ್ಯೋಗಿಕ ವೆಬ್‍ಸೈಟ್‍ಗಳ ಮೂಲಕ ಫಲಿತಾಂಶ ಪ್ರಕಟಗೊಳ್ಳಲಿದೆ. keralaresults.nic.in ಎಂಬ ವೆಬ್‍ಸೈಟ್‍ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ರಾಜ್ಯದಲ್ಲಿ 426999 ಮಂದಿ ರೆಗ್ಯುಲರ್ ಹಾಗೂ 408ಮಂದಿ ಖಾಸಗಿಯಾಗಿ ಪರೀಕ್ಷೆ ಬರೆದಿದ್ದಾರೆ. ಕೇರಳದಲ್ಲಿ ಮಾ. 31ರಿಂದ ಏ. 29ರ ವರೆಗೆ ಎಸ್ಸೆಸೆಲ್ಸಿ ಪರೀಕ್ಷೆ ನಡೆದಿತ್ತು. ಒಂದುವರೆ ತಿಂಗಳ ನಂತರ ಫಲಿತಾಂಶ ಪ್ರಕಟಗೊಳ್ಳುತ್ತಿದೆ.