ಸಿಯೋಲ್: ಕಳೆದು ತಿಂಗಳು ಮೇ 23 ರಿಂದ 25ರವರೆಗೆ ಜಪಾನ್ ನಲ್ಲಿ ಕ್ವಾಡ್ ನಾಯಕರ ಸಭೆ ನಡೆಯಿತು. ಈ ಮಹತ್ವದ ಸಭೆ ಮುಕ್ತಾಯಗೊಂಡ ಬಳಿಕ ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಮತ್ತೆ ಕ್ಷಿಪಣಿ ಪರೀಕ್ಷೆಯನ್ನು ಮುಂದುವರಿಸಿದ್ದಾನೆ. ಉತ್ತರ ಕೊರಿಯಾ ತನ್ನ ಪೂರ್ವ ಕರಾವಳಿಯಲ್ಲಿ ಕಡಿಮೆ ವ್ಯಾಪ್ತಿಯ 8 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪರೀಕ್ಷಿಸಿದೆ.
ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು (ಜೆಸಿಎಸ್) ಕೊರಿಯಾ ಈ ಕ್ಷಿಪಣಿಗಳನ್ನು ಪ್ಯೊಂಗ್ಯಾಂಗ್‌ನ ಸುನಾನ್ ಪ್ರದೇಶದಿಂದ ಸ್ಥಳೀಯ ಕಾಲಮಾನ ಬೆಳಿಗ್ಗೆ 9:08 ರಿಂದ 9:43 ರವರೆಗೆ ಪರೀಕ್ಷಿಸಿತು ಎಂದು ತಿಳಿಸಿದ್ದಾರೆ. ದಕ್ಷಿಣ ಕೊರಿಯಾದ ಸೇನೆಯು ಈ ಬಗ್ಗೆ ಸಂಪೂರ್ಣ ನಿಗಾವಹಿಸಿದ್ದು, ಕಣ್ಗಾವಲು ಬಲಪಡಿಸುವ ಸಂದರ್ಭದಲ್ಲಿ ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ನಿಕಟ ಸಹಕಾರದಲ್ಲಿದೆ ಎಂದು ಹೇಳಿದ್ದಾರೆ.
ಯೋನ್ಹಾಪ್ ನ್ಯೂಸ್ ಏಜೆನ್ಸಿ ಪ್ರಕಾರ, ಇದು ಈ ವರ್ಷ ಉತ್ತರ ಕೊರಿಯಾ ನಡೆಸಿದ 18ನೇ ಕ್ಷಿಪಣಿ ಪರೀಕ್ಷೆಯಾಗಿದೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್-ಯೋಲ್ ಮೇ 10 ರಂದು ಅಧಿಕಾರ ವಹಿಸಿಕೊಂಡ ನಂತರ ಇದು ಮೂರನೇ ಪರೀಕ್ಷೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ.